ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ - undefined

ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಜು.15-27 ರವರೆಗೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದರು.

ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್
author img

By

Published : Jul 10, 2019, 5:43 PM IST

ಮಂಗಳೂರು: ರೋಗಿಯ ಕೆಮ್ಮು, ಸೀನು ಹಾಗೂ ಗಾಳಿಯಿಂದ ಆರೋಗ್ಯವಂತ ವ್ಯಕ್ತಿಗೆ ಕ್ಷಯರೋಗ, ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತದೆ. ಆದ್ದರಿಂದ ಸರ್ಕಾರದ ಸೂಚನೆಯ ಮೇರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಜು.15-27 ರವರೆಗೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದರು‌.

ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್

ಕ್ಷಯರೋಗಗಳ ಪತ್ತೆಗೆ ಹಲವಾರು ವಿಧಾನಗಳಿವೆ. ಕಫ ಪರೀಕ್ಷೆ, ಕ್ಷ-ಕಿರಣಗಳ ಮೂಲಕ, ಶ್ವಾಸಕೋಶೋತ್ತರ ಪರೀಕ್ಷೆ, ಎಫ್.ಎನ್.ಎ.ಸಿ. ಬಯಾಪ್ಸಿ ಸ್ಕ್ಯಾನಿಂಗ್ ಮೂಲಕ ರೋಗದ ಲಕ್ಷಣಗಳನ್ನು ಪತ್ತೆ ಮಾಡಲಾಗುತ್ತದೆ. ಸಾಮಾನ್ಯ ಕ್ಷಯವು 6-9 ತಿಂಗಳ ಕಾಲ ನೀಡುವ ಔಷಧಿ ನೀಡುವ ಮೂಲಕ ಗುಣವಾಗುತ್ತದೆ. ಸರಿಯಾಗಿ ಚಿಕಿತ್ಸೆ ಲಭ್ಯವಾಗದಿದ್ದರೆ ಮತ್ತೆ ಮರುಕಳಿಸುವ ಸಾಧ್ಯತೆಯೂ ಇರುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಕ್ಕೆ 1600-1700 ಕ್ಷಯರೋಗ ಪ್ರಕರಣಗಳು ದಾಖಲಾಗುತ್ತದೆ. ಸಾಮಾನ್ಯವಾಗಿ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿಯನ್ನು ನೀಡುವ ಕೆಲಸ ಆಗುತ್ತಿದೆ.
ಎರಡು ವಾರಗಳ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ನಮ್ಮ ಜಿಲ್ಲೆಯಲ್ಲಿ 559 ತಂಡವನ್ನು ರಚಿಸಿ ಒಂದು ತಂಡದಲ್ಲಿ ಇಬ್ಬರಂತೆ ಮನೆ ‌ಮನೆ ಭೇಟಿ ಹಾಗೂ ಮೇಲ್ಕಂಡ ಪರಿಸರಕ್ಕೆ ಭೇಟಿ ನೀಡಿ ಕ್ಷಯರೋಗದ ಲಕ್ಷಣ ಕಂಡು ಬಂದಲ್ಲಿ ತಪಾಸಣೆ ನಡೆಸಲು ಜಾಗೃತಿ ಮೂಡಿಸಲಾಗುತ್ತದೆ ಎಂದು ಡಾ.ರಾಮಕೃಷ್ಣ ರಾವ್ ಮಾಹಿತಿ ನೀಡಿದ್ರು.

Intro:ಮಂಗಳೂರು: ಕ್ಷಯರೋಗ ಸಾಂಕ್ರಾಮಿಕ ರೋಗ ಆರೋಗ್ಯವಂತ ವ್ಯಕ್ತಿಗೆ ರೋಗಿಯಿಂದ ಕೆಮ್ಮು, ಸೀನು ಹಾಗೂ ಗಾಳಿಯಿಂದ ಹರಡುತ್ತದೆ. ಆದ್ದರಿಂದ ರಾಜ್ಯ ಸರಕಾರದ ಸೂಚನೆಯ ಮೇರೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಜು.15-27 ರವರೆಗೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಎಂದು ಹೇಳಿದರು‌.

ಕ್ಷಯರೋಗಗಳ ಪತ್ತೆಗೆ ಹಲವಾರು ವಿಧಾನಗಳಿವೆ. ಕಫ ಪರೀಕ್ಷೆ, ಕ್ಷ-ಕಿರಣಗಳ ಮೂಲಕ, ಶ್ವಾಸಕೋಶೇತ್ತರ ಪರೀಕ್ಷೆ, ಎಫ್.ಎನ್.ಎ.ಸಿ. ಬಯಾಪ್ಸಿ ಸ್ಕ್ಯಾನಿಂಗ್ ಗಳ ಮೂಲಕ ಕ್ಷಯರೋಗ ಪತ್ತೆ ಮಾಡಲಾಗುತ್ತದೆ. ಸಾಮಾನ್ಯ ಕ್ಷಯವು 6-9 ತಿಂಗಳ ಕಾಲ ನೀಡುವ ಔಷಧಿ ಮೂಲಕ ಗುಣವಾಗುತ್ತದೆ. ಆದ್ದರಿಂದ ಸರಿಯಾಗಿ ಚಿಕಿತ್ಸೆ ಲಭ್ಯವಾಗದಿದ್ದರೆ ಮತ್ತೆ ಮರುಕಳಿಸುವ ಸಾಧ್ಯತೆಯೂ ಇರುತ್ತದೆ.

Body:ದ.ಕ.ಜಿಲ್ಲೆಯಲ್ಲಿ ವರ್ಷಕ್ಕೆ 1600-1700 ಕ್ಷಯರೋಗ ಪ್ರಕರಣಗಳು ದಾಖಲಾಗುತ್ತದೆ. ಸಾಮಾನ್ಯವಾಗಿ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿಯನ್ನು ನೀಡುವ ಕೆಲಸ ಆಗುತ್ತಿದೆ. ಆದ್ದರಿಂದ ಕ್ಷಯರೋಗದ ಇನ್ನೂ ಹೆಚ್ಚಿನ ಪತ್ತೆಗಾಗಿ ಹೈರಿಸ್ಕ್ ಗುಂಪು ಮಾಡಲಾಗಿದೆ. ಇದರಲ್ಲಿ ಅಪೌಷ್ಟಿಕತೆಯುಳ್ಳವರು, ಎಚ್ ಐವಿ ಸೋಂಕಿತರು, ಮಧುಮೇಹಿಗಳು, ಸ್ಲಂಗಳಲ್ಲಿ ವಾಸಿಸುವವರು, ವೃದ್ಧಾಪ್ಯ ಕೇಂದ್ರಗಳಲ್ಲಿರುವವರು, ನಿರಾಶ್ರಿತರ ಕೇಂದ್ರಗಳಿಗೆ ಇವರಲ್ಲಿ ಯಾರಿಗಾದರೂ ಕ್ಷಯರೋಗದ‌ ಲಕ್ಷಣಗಳಿವೆಯೇ ಎಂದು ಖಾತರಿಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ‌. ಆದ್ದರಿಂದ ಎರಡು ವಾರಗಳ ಈ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ನಮ್ಮ ಜಿಲ್ಲೆಯಲ್ಲಿ 559 ತಂಡವನ್ನು ರಚಿಸಿ ಒಂದು ತಂಡದಲ್ಲಿ ಇಬ್ಬರಂತೆ ಮನೆ‌ಮನೆ ಭೇಟಿ ಹಾಗೂ ಮೇಲ್ಕಂಡ ಪರಿಸರಕ್ಕೆ ಭೇಟಿ ನೀಡಿ ಕ್ಷಯರೋಗದ ಲಕ್ಷಣ ಕಂಡು ಬಂದಲ್ಲಿ ತಪಾಸಣೆ ನಡೆಸಲು ಜಾಗೃತಿ ಮೂಡಿಸಲಾಗುತ್ತದೆ ಎಂದು ಡಾ.ರಾಮಕೃಷ್ಣ ರಾವ್ ಹೇಳಿದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.