ETV Bharat / state

ಧೂಳು ಬರುವ ಹಾಗೆ ವಾಹನ ಚಲಾಯಿಸ್ಬೇಡ ಎಂದಿದ್ದಕ್ಕೆ ಮೈಮೇಲೆ ಟಿಪ್ಪರ್‌ ಚಲಾಯಿಸಿ ಕೊಲೆ! - ETV Bharath Kannada news

ಧೂಳು ಬರದಂತೆ ನಿಧಾನವಾಗಿ ವಾಹನ ಚಲಾಯಿಸು ಎಂದು ಬುದ್ಧಿ ಹೇಳಿದ್ದಕ್ಕೆ ಒಬ್ಬ ವ್ಯಕ್ತಿ ಕೊಲೆಯಾಗಿದ್ದಾರೆ!.

Trucks driver Killed for tell to drive slowly
ಧೂಳು ಬರುವ ಹಾಗೆ ವಾಹನ ಚಲಾಯಿಸಬೇಡ ಎಂದದ್ದಕ್ಕೆ ಟಿಪ್ಪರ್ ಮೈಮೇಲೆ ಚಲಾಯಿಸಿ ಕೊಲೆ
author img

By

Published : Feb 3, 2023, 8:48 PM IST

ಮಂಗಳೂರು (ದಕ್ಷಿಣ ಕನ್ನಡ) : ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ, ನಿಧಾನವಾಗಿ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಘಟನೆ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಕೊಲೆಗೀಡಾದ ವ್ಯಕ್ತಿ. ಫಯಾಝ್‌ಗೆ ರಾಡ್​ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಹತ್ಯೆ ಮಾಡಲಾಗಿದೆ.

ಫಯಾಝ್​​ ಕೋಟೆಬಾಗಿಲು ಮಸೀದಿಗೆ ನಮಾಜ್​ಗೆಂದು ಮಧ್ಯಾಹ್ನ ತೆರಳುವ ಸಂದರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದಾನೆ. ಇದರಿಂದಾಗಿ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್​​ ಮೇಲೆ ಧೂಳು ಹಾರಿದೆ. ಆಗ ಕೋಪಗೊಂಡ ಫಯಾಝ್​​ ನಿಧಾನ ಹೋಗುವಂತೆ ಆರೀಸ್​ಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ನಮಾಜ್​ ಮುಗಿಸಿಕೊಂಡು ಹಿಂತಿರುಗುವ ಸಂದರ್ಭದಲ್ಲಿಯೂ ಮತ್ತೆ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಫಯಾಝ್​​ ಟಿಪ್ಪರ್​ನ ಮೇಲೆ ಹೋಗಿ ಮಾತನಾಡಿದ್ದಾನೆ. ಆಗ ಆರೀಸ್ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಟಿಪ್ಪರ್ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದಾನೆ. ಆಯತಪ್ಪಿ ಫಯಾಝ್​​ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೆಯೇ ಟಿಪ್ಪರ್ ಹಾಯಿಸಿದ್ದಾನೆ.

ರಾಡ್​ ಏಟು ಮತ್ತು ಟಿಪ್ಪರ್​ನ ಅಡಿಗೆ ಬಿದ್ದ ಫಯಾಝ್​ ಗಂಭೀರ ಗಾಯಗೊಂಡಿದ್ದನು. ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಆರೋಪಿ ಆರೀಸ್ ಟಿಪ್ಪರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರು: ಚಿನ್ನಾಭರಣ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿದು ಸಿಬ್ಬಂದಿ ಹತ್ಯೆ

ಚಿನ್ನ, ಇ-ಸಿಗರೇಟ್​ ವಶ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನ ಮತ್ತು ಇ ಸಿಗರೇಟನ್ನು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು 19.01.2023 ರಿಂದ 31.01.2023 ರ ಅವಧಿಯಲ್ಲಿ ದುಬೈನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ರೂ.90,34,970/- ಮೌಲ್ಯದ 1617 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ದಂಪತಿಯಿಂದ ಸುಲಿಗೆ ಆರೋಪ: ಸಂಪಿಗೆಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ವಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.