ETV Bharat / state

ನೆಲ್ಯಾಡಿಯ ಲಾವತಡ್ಕದಲ್ಲಿ ವಾಹನ ಪಲ್ಟಿ: ಪರಿಶೀಲನೆ ವೇಳೆ ಗೋಮಾಂಸ ಪತ್ತೆ - ರಾಷ್ಟ್ರೀಯ ಹೆದ್ದಾರಿ 75ರ ಸಮೀಪ ಲಾವತ್ತಡ್ಕ

ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ ಲಾವತ್ತಡ್ಕ ಎಂಬಲ್ಲಿ ಮಂಗಳವಾರ ಮುಂಜಾನೆ ಟೆಂಪೋ ಟ್ರಾವೆಲ್ಲರ್‌ ಪಲ್ಟಿಯಾಗಿದ್ದು ಪರಿಶೀಲನೆ ವೇಳೆ ಈ ವಾಹನದಲ್ಲಿ ಜಾನುವಾರು ಮಾಂಸ ಪತ್ತೆಯಾಗಿದೆ.

ಟ್ರಾವೆಲರ್ ಪಲ್ಟಿ
ಟ್ರಾವೆಲರ್ ಪಲ್ಟಿ
author img

By

Published : Mar 17, 2020, 2:11 PM IST

ಮಂಗಳೂರು: ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ ಲಾವತ್ತಡ್ಕ ಎಂಬಲ್ಲಿ ಮಂಗಳವಾರ ಮುಂಜಾನೆ ಟೆಂಪೋ ಟ್ರಾವೆಲ್ಲರ್‌ವೊಂದು ಪಲ್ಟಿಯಾಗಿದ್ದು ಪರಿಶೀಲನೆ ವೇಳೆ ವಾಹನದಲ್ಲಿ ಜಾನುವಾರು ಮಾಂಸ ಪತ್ತೆಯಾಗಿದೆ.

ವಾಹನ ಪಲ್ಟಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಟಾರ್ಪಲ್‌ವೊಂದರಲ್ಲಿ ಕಟ್ಟಿದ್ದ ಜಾನುವಾರು ಮಾಂಸ ಪತ್ತೆಯಾಗಿದೆ.

Beef detection if inspected
ಪಲ್ಟಿಯಾಗಿದ್ದ ವಾಹನ ಪರಿಶೀಲನೆ ವೇಳೆ ಗೋಮಾಂಸ ಪತ್ತೆ

ಹಾಸನ ಕಡೆಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ವೇಳೆ ಲಾವತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಮಾಂಸ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.