ETV Bharat / state

ಮಂಗಳೂರು: ಸಾಮಾಜಿಕ ಕಾರ್ಯಕರ್ತನಿಗೆ ಮಂಗಳಮುಖಿಯರ ಉಪಟಳ ಆರೋಪ

ಸಾಮಾಜಿಕ ಕಾರ್ಯಕರ್ತ ಆಸೀಫ್ ಅವರಿಗೆ ಮಂಗಳಮುಖಿಯರ ತೊಂದರೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Transgender group torture to Social activist Asif
'ಆಪದ್ಬಾಂಧವ'ಗೆ ಮಂಗಳಮುಖಿಯರ ಕಾಟ
author img

By

Published : Feb 16, 2022, 12:20 PM IST

ಮಂಗಳೂರು: ಸುರತ್ಕಲ್ ಎನ್​​​ಐಟಿಕೆ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ 'ಆಪತ್ಭಾಂಧವ ಆಸೀಫ್' ಅವರಿಗೆ ನಿನ್ನೆ(ಮಂಗಳವಾರ) ರಾತ್ರಿ ಮಂಗಳಮುಖಿಯರ ಗುಂಪು ಉಪಟಳ ನೀಡಿದ ಘಟನೆ ನಡೆದಿದೆ.

Transgender group torture to Social activist Asif

ಮಂಗಳೂರಿನ ಎನ್​​ಐಟಿಕೆ ಟೋಲ್ ಗೇಟ್ ಅಕ್ರಮವಾಗಿದ್ದು, ಇದನ್ನು ಮುಚ್ಚಬೇಕೆಂದು ಆಗ್ರಹಿಸಿ ಆಸೀಫ್ ಅವರು ಕಳೆದ ಕೆಲವು ದಿನಗಳಿಂದ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿದಿನ ವಿಭಿನ್ನವಾಗಿ ಹೋರಾಟ ನಡೆಸುತ್ತಿರುವ ಅವರು ಧರಣಿ ನಡೆಸುತ್ತಿರುವ ವೇದಿಕೆಗೆ ರಾತ್ರಿ 12 ಗಂಟೆ ಸುಮಾರಿಗೆ ಏಕಾಏಕಿ ಮುಗಿಬಿದ್ದ ಮಂಗಳಮುಖಿಯರ ಗುಂಪು ಅಸೀಫ್ ಅವರ ಜತೆಗೆ ಅಸಭ್ಯವಾಗಿ ವರ್ತಸಿ, ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗ್ತಿದೆ.

ಆಸೀಫ್ ಈ ಘಟನೆಯನ್ನು ತಮ್ಮ ಫೇಸ್‌ಬುಕ್​​ನಲ್ಲಿ ಲೈವ್ ಮಾಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಾರು-ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.