ಮಂಗಳೂರು: ನಗರದಲ್ಲಿ ಸಂಚಾರಿ ಪೊಲೀಸರು 84,752 (ನವೆಂಬರ್ ಅಂತ್ಯಕ್ಕೆ) ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದು, 3.75 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.
ಮಂಗಳೂರು ನಗರದಲ್ಲಿ ಹಲವೆಡೆ ನೋ ಪಾರ್ಕಿಂಗ್ ಇದ್ದಲ್ಲಿ ವಾಹನ ಪಾರ್ಕಿಂಗ್ ಮಾಡುವುದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು, ಓವರ್ ಸ್ಪೀಡ್, ಫೋನ್ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ, ಎಮಿಷನ್ ಸರ್ಟಿಫಿಕೇಟ್, ಇನ್ಸೂರೆನ್ಸ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಹೊಂದಿಲ್ಲದಿರುವುದು, ಸಿಗ್ನಲ್ ಜಂಪ್, ರಾಂಗ್ ಸೈಡ್ ಹೀಗೆ ಒಂದಿಲ್ಲೊಂದು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ನಡೆಯುತ್ತಲೇ ಇರುತ್ತವೆ.
ನಗರದಲ್ಲಿ 2020 ಜನವರಿಯಿಂದ ನವೆಂಬರ್ವರೆಗೆ ಇಂತಹ 84,752 ಪ್ರಕರಣಗಳು ದಾಖಲಾಗಿವೆ. ದಿನವೊಂದಕ್ಕೆ ಸರಾಸರಿ 250 ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳು ಕಂಡುಬರುತ್ತಿವೆ. ಇಷ್ಟು ಪ್ರಕರಣಗಳಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ರೂ. 3 ಕೋಟಿ 75 ಲಕ್ಷ, 24 ಸಾವಿರದ 500 ರೂ. ದಂಡ ವಸೂಲಿ ಮಾಡಿದೆ.
ಟ್ರಾಫಿಕ್ ನಿಯಮ ಉಲ್ಲಂಘಿಸದಂತೆ ಪೊಲೀಸ್ ಇಲಾಖೆಯ ಜಾಗೃತಿಯ ನಡುವೆಯೂ ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಆತಂಕಕಾರಿಯಾಗಿದೆ.