ETV Bharat / state

ಡಿ.1ರಿಂದ ಸುರತ್ಕಲ್ ಟೋಲ್ ಗೇಟ್​ನಲ್ಲಿ‌ ಸುಂಕ ವಸೂಲಾತಿ ರದ್ದು: ಡಿಸಿ ಆದೇಶ - ಸುರತ್ಕಲ್ ಟೋಲ್ ಗೇಟ್

ಡಿಸೆಂಬರ್‌ 1ರಿಂದ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Toll collection cancel in Suratkal toll gate
ಡಿ.1ರಿಂದ ಸುರತ್ಕಲ್ ಟೋಲ್ ಗೇಟ್​ನಲ್ಲಿ‌ ಸುಂಕ ವಸೂಲಾತಿ ರದ್ದು
author img

By

Published : Nov 29, 2022, 11:12 AM IST

ಮಂಗಳೂರು(ದಕ್ಷಿಣ ಕನ್ನಡ): ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್​ನಲ್ಲಿ ಡಿಸೆಂಬರ್ 1ರಿಂದ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ರದ್ದುಪಡಿಸಿ ದ.ಕ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಆದೇಶಿಸಿದ್ದಾರೆ. ಸುರತ್ಕಲ್​ ಎನ್​ಐಟಿಕೆ ಟೋಲ್​ ಗೇಟ್​ ರದ್ದುಪಡಿಸುವಂತೆ ಟೋಲ್​ಗೇಟ್​ ವಿರೋಧಿ ಹೋರಾಟ ಸಮಿತಿ ಅಕ್ಟೋಬರ್‌ 28 ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದೆ.

ಎನ್​ಐಟಿಕೆ ಟೋಲ್​ಗೇಟ್​ ರದ್ದುಪಡಿಸಿ ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕದೊಂದಿಗೆ ಡಿಸೆಂಬರ್‌ 1ಕ್ಕೆ ಅನ್ವಯವಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೂ ಎನ್​ಐಟಿಕೆ ಟೋಲ್​ಗೇಟ್​ನಲ್ಲಿ ಟೋಲ್​ ಸಂಗ್ರಹ ಮುಂದುವರಿದಿತ್ತು. ಇದೀಗ ಈ ಬಗ್ಗೆ ಆದೇಶ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಡಿ. 1ರಿಂದ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ಇಲ್ಲಿಯ ಟೋಲ್​ ದರವನ್ನು ಸೇರಿಸಿ ಹೆಜಮಾಡಿಯಲ್ಲಿ ವಸೂಲಿ ಮಾಡಿದರೆ ಅಲ್ಲಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್​ ಕಾಟಿಪಳ್ಳ ಕೆಲ ದಿನಗಳ ಹಿಂದಷ್ಟೇ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ರದ್ದು ಆದೇಶವಾದರೂ 30ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.