ETV Bharat / state

ಶೌಚಗೃಹದ ಗೋಡೆ ಕುಸಿದು ವೃದ್ಧೆ ಸಾವು

ವೃದ್ಧೆ ಸ್ನಾನ ಮಾಡಲೆಂದು ಶೌಚಗೃಹದ ಬಳಿ ಹೋದಾಗ ಅಲ್ಲಿನ ಗೋಡೆ ಈಕೆಯ ಮೇಲೆ ಕುಸಿದಿದೆ. ಪರಿಣಾಮ ವೃದ್ಧೆ ಸಾವಿಗೀಡಾಗಿದ್ದಾರೆ.

Toilet wall collapses and old woman dies in magalore
ವೃದ್ಧೆ ಸಾವು
author img

By

Published : Jul 28, 2020, 3:35 AM IST

ಮಂಗಳೂರು: ಶೌಚಗೃಹದ ಗೋಡೆ ಕುಸಿದು ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಎಳತ್ತೂರು ಗ್ರಾಮದ ನೆಲಗುಡ್ಡೆ ಎಂಬಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಉಚ್ಚಿಲ ನಿವಾಸಿ ಜಾನಕಿ ಆಚಾರ್ಯ (70) ಮೃತ ಮಹಿಳೆ. ಜಾನಕಿಯವರು ತಿಂಗಳ ಹಿಂದೆ ನೆಲಗುಡ್ಡೆಯಲ್ಲಿರುವ ಮಗಳ ಮನೆಗೆ ಬಂದಿದ್ದು, ಸ್ನಾನ ಮಾಡಲೆಂದು ಶೌಚಗೃಹಕ್ಕೆ ತೆರಳಿರುವ ಸಂದರ್ಭ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.ಈ ಬಗ್ಗೆ ಮುಲ್ಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.