ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರೊಂದಿಗೆ ನಡೆದುಕೊಳ್ಳುವ ರೀತಿಅತಿರೇಕವಾಗುತ್ತಿದ್ದು, ಗೂಂಡಾಗಿರಿ ನಿಲ್ಲಿಸದಿದ್ದರೆ ಗೆರಿಲ್ಲಾ ಯುದ್ಧದ ಶೈಲಿಯಲ್ಲಿ ಬಡಿದು ಬುದ್ಧಿ ಕಲಿಸಬೇಕಾದೀತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಎಚ್ಚರಿಸಿದ್ದಾರೆ.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ಮಾತನಾಡಿ, ಫೆ. 19ರ ಶುಕ್ರವಾರ ಸಂಜೆ ತನಕ ಅವಕಾಶ ಕೊಡುತ್ತಿದ್ದೇವೆ. ಅದರೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಈ ಹಿಂದಿನ ವ್ಯವಸ್ಥೆಯೇ ಮುಂದುವರಿಯಬೇಕು. ಸದ್ಯ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಸಾಗುತ್ತಿದೆ.
ನಮಗೆ ಸುಭಾಷ್ ಚಂದ್ರ ಭೋಸ್ರ ದಾರಿಯಲ್ಲಿ ಹೋಗಲು ಗೊತ್ತು, ಅದಕ್ಕೆ ಅವಕಾಶ ಕೊಡಬೇಡಿ. ಲೋಪಗಳನ್ನು ಸರಿಪಡಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.