ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೆಪೇಟೆಯ ಅರುಣ್ ಶೆಟ್ಟಿ (30), ಗುರಿಪಳ್ಳದ ಹೇಮಂತ್ ಬಿರ್ವ ಯಾನೆ ಹರ್ಷಿತ್(20), ಉಜಿರೆಯ ಸಂಪತ್ ಯಾನೆ ಶ್ಯಾಮ್(24) ಬಂಧಿತರು.
ವಂದನಾ ಎಂಬುವರ ದ್ವಿಚಕ್ರ ವಾಹನ ಮೇ 5ರಂದು ನಾಪತ್ತೆಯಾಗಿತ್ತು. ಈ ಕುರಿತು ಅವರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು .
ಸೆ. 17ರಂದು ಉಜಿರೆ ಗ್ರಾಮದ ಪಂಚರಿಕಾಡು ರಬ್ಬರ್ ತೋಟದಲ್ಲಿ ಮೂವರು ಯುವಕರು ಸ್ಕೂಟರ್ ವಾಹನವನ್ನು ಬಿಚ್ಚುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಜಿರೆಯ ಗ್ಯಾರೇಜ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನ ಮಾಡಿರುವುಲ್ಲದೆ, ಬೇರೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಅದರ ಬಿಡಿ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇನ್ನು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಪಿಎಸ್ಐ ನಂದ ಕುಮಾರ್ ನೇತೃತ್ವದಲ್ಲಿ ಎಎಸ್ಐ ದೇವಪ್ಪ , ಎಎಸ್ಐ ತೀಲಕ್, ಪಿಸಿಗಳಾದ ಪುಟ್ಟಸ್ವಾಮಪ್ಪ , ಚರಣ್ ರಾಜ್, ವೆಂಕಪ್ಪ, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.