ಮಂಗಳೂರು: ನಗರದ ಮುಲ್ಕಿ ಹಳೆಯಂಗಡಿಯಲ್ಲಿ ಎಂಟು ವರ್ಷದ ಮಗು ಸಹಿತ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಗು ಸಹಿತ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆ
ಮುಲ್ಕಿಯ ಹಳೆಯಂಗಡಿಯ ಕಲ್ಲಾಪು ರೈಲ್ವೆ ಗೇಟ್ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವ ವಿನೋದ್ ಸಾಲಿಯಾನ್ (40), ರಚನಾ (38) ಮತ್ತು ಅವರ ಪುತ್ರ ಸಾಧ್ಯ ಸಾಲಿಯಾನ್(8) ಆತ್ಮಹತ್ಯೆ ಮಾಡಿಕೊಂಡವರು. ಮಗುವಿಗೆ ವಿಷ ನೀಡಿ ಕೊಂದ ದಂಪತಿಗಳು, ಆ ಬಳಿಕ ತಾವೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಂಟು ವರ್ಷದ ಮಗು ಸಹಿತ ಮೂವರು ಆತ್ಮಹತ್ಯೆ
ವಿನೋದ್ ಸಾಲಿಯಾನ್ ಅವರು ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದರು. ಕಳೆದ ವರ್ಷ ಊರಿಗೆ ಬಂದ ಅವರು ಊರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.