ಮಂಗಳೂರು: ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಯುವತಿ ಮೃತದೇಹ ಕೊಣಾಜೆ ಇನೋಳಿ ಕೊರಿಯ ಎಂಬಲ್ಲಿ ಪತ್ತೆಯಾಗಿದೆ.
ಯುವತಿ ಕಲ್ಪಿತಾ ಮಂದಣ್ಣ ಎಂಬುವರ ಮೃತದೇಹ ಪತ್ತೆಯಾಗಿದೆ. ನಿನ್ನೆ ಮಧ್ಯರಾತ್ರಿ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಬಿ.ಸಿ. ರೋಡ್ನ ಪಾಣೆ ಮಂಗಳೂರು ಸಮೀಪದ ನೇತ್ರಾವತಿ ನದಿಗೆ ಹಾರಿದ್ದರು.
ತಾಯಿ ಕವಿತಾ ಮಂದಣ್ಣ ಮೃತದೇಹ ನಿನ್ನೆ ರಾತ್ರಿಯೇ ಪತ್ತೆಯಾಗಿತ್ತು. ಮಗ ಕೌಶಿಕ್ ಮಂದಣ್ಣ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದೆ. ದೇರಳಕಟ್ಟೆಯ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ.