ಮಂಗಳೂರು: ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ಮೂರು ಕಾಗೆಗಳ ಕಳೇಬರ ಪತ್ತೆಯಾಗಿದ್ದು, ಹಕ್ಕಿಜ್ವರದ ಭೀತಿ ಎದುರಾಗಿದೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪದಲ್ಲಿರುವ ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಕಾಗೆಗಳ ಕಳೇಬರ ಇಂದು ಬೆಳಗ್ಗೆ ಪತ್ತೆಯಾಗಿವೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕಾಗೆಗಳ ದೇಹದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿದ್ದಾರೆ.
ಓದಿ: ವಿಟ್ಲ: ತೋಟದಲ್ಲಿ ಆಡುತ್ತಿದ್ದ ವೇಳೆ ಕೆರೆಗೆ ಬಿದ್ದ ಮಗು ಸಾವು
ಅದೇ ರೀತಿ ನಿನ್ನೆ ನಗರದ ಹ್ಯಾಟ್ ಹಿಲ್ ಸಮೀಪ ವಿದ್ಯುತ್ ಕಂಬದ ಕೆಳಗೆ ಎರಡು ಹದ್ದುಗಳು ಮೃತಪಟ್ಟಿದ್ದು, ಇವುಗಳ ಮಾದರಿಯನ್ನು ಸಹ ಲ್ಯಾಬ್ಗೆ ಕಳುಹಿಸಲಾಗಿದೆ. ನಂತರ ಅವುಗಳ ಕಳೇಬರವನ್ನು ಅರಣ್ಯ ಅಧಿಕಾರಿಗಳು ಸುಟ್ಟು ಹಾಕಿದರು.