ETV Bharat / state

ಮಚ್ಚು ಹಿಡಿದು ಕರ್ತವ್ಯನಿರತ ಅಧಿಕಾರಿಗಳಿಗೆ ಬೆದರಿಕೆ, ದೂರು ದಾಖಲು - Threats to Duty Officer

ಘನತ್ಯಾಜ್ಯ ಘಟಕಕ್ಕೆಂದು ಮೀಸಲಿಟ್ಟ 45 ಸೆಂಟ್ಸ್ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯ ಪರಿಶೀಲನೆಗೆಂದು ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಯೋರ್ವ ಮಾರಕಾಯುಧಗಳೊಂದಿಗೆ ಆಗಮಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

Threats to Duty Officer
ಮಚ್ಚು ಹಿಡಿದು ಕೊಂಡು ಬಂದು ಕರ್ತವ್ಯನಿರತ ಅಧಿಕಾರಿಗಳಿಗೆ ಬೆದರಿಕೆ..
author img

By

Published : Oct 7, 2020, 1:04 PM IST

ಉಪ್ಪಿನಂಗಡಿ (ದ.ಕ): ಪಂಚಾಯತ್ ಅಧೀನದ ಘನತ್ಯಾಜ್ಯ ಘಟಕಕ್ಕೆ ಮೀಸಲಿಟ್ಟ ಭೂಮಿಯ ಪರಿಶೀಲನೆಗೆಂದು ಹೋಗಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಯೋರ್ವ ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಜೀವ ಬೆದರಿಕೆ ಹಾಕಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

Threats to Duty Officer
ಮಚ್ಚು ಹಿಡಿದುಕೊಂಡು ಬಂದು ಕರ್ತವ್ಯನಿರತ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ವ್ಯಕ್ತಿ

ಉಪ್ಪಿನಂಗಡಿ ಪಂಚಾಯತ್ ಪಿಡಿಒ ವಿಲ್ಪ್ರೆಡ್ ರೋಡ್ರಿಗಸ್ ಮತ್ತು ಪಂಚಾಯತ್ ಸಿಬ್ಬಂದಿ ಇಸಾಕ್ ಗುತ್ತಿಗೆದಾರರೊಂದಿಗೆ ಅಜಿರಾಳ ಎಂಬಲ್ಲಿ ಪಂಚಾಯತ್ ಘನತ್ಯಾಜ್ಯ ಘಟಕಕ್ಕೆಂದು ಮೀಸಲಿಟ್ಟ 45 ಸೆಂಟ್ಸ್ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯ ಪರಿಶೀಲನೆಗೆಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ವ್ಯಕ್ತಿ ಮಚ್ಚು ಹಿಡಿದು ಅಧಿಕಾರಿ ಮತ್ತು ಸಿಬ್ಬಂದಿಗೆ ಅವಾಚ್ಯ ಪದಗಳಿಂದ ಬೈಯುತ್ತಾ, ಜೀವ ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.