ETV Bharat / state

ನೂತನ ಕೃಷಿ ಕಾಯ್ದೆಗಳಿಂದ ಬೇಸಾಯದಲ್ಲಿ ಮಹತ್ವದ ಬದಲಾವಣೆ: ಬಿಜೆಪಿ ರೈತ ಮೋರ್ಚಾ

ಕೇಂದ್ರ ಸರ್ಕಾರವು ದೇಶದ ಕೃಷಿ ಉತ್ಪನ್ನಕ್ಕಾಗಿ ಮಾರುಕಟ್ಟೆ ಸೃಷ್ಟಿಸುವ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಸಾಧ್ಯತೆ ಇರುವ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಮಸೂದೆಗಳ ಮೂಲಕ ರೈತರು ಮುಕ್ತವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ವ್ಯಾಪಾರಿಗಳಿಗೂ ತಮಗೆ ಬೇಕಾದ ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಖರೀದಿಸುವ ಅವಕಾಶ ಕಲ್ಪಿಸುತ್ತದೆ ಎಂದು ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ ಹೇಳಿದರು.

ಎ.ವಿ. ತೀರ್ಥರಾಮ
ಎ.ವಿ. ತೀರ್ಥರಾಮ
author img

By

Published : Sep 23, 2020, 12:49 AM IST

ಪುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಕರ ಮತ್ತು ಕೃಷಿ ಕ್ಷೇತ್ರದ ಸುಧಾರಣೆ ಸಂಬಂಧಿತ ಹೊಸ ಕಾಯ್ದೆಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತಮೋರ್ಚಾ ಸ್ವಾಗತಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ, ಕೇಂದ್ರ ಸರ್ಕಾರವು ದೇಶದ ಕೃಷಿ ಉತ್ಪನ್ನಕ್ಕಾಗಿ ಮಾರುಕಟ್ಟೆ ಸೃಷ್ಟಿಸುವ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಸಾಧ್ಯತೆ ಇರುವ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಮಸೂದೆಗಳ ಮೂಲಕ ರೈತರು ಮುಕ್ತವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ವ್ಯಾಪಾರಿಗಳಿಗೂ ತಮಗೆ ಬೇಕಾದ ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಖರೀದಿಸುವ ಅವಕಾಶ ಕಲ್ಪಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ

ರೈತರ ಕಲ್ಯಾಣ ಮತ್ತು ರಕ್ಷಣೆ, ಬೆಲೆ ಭರವಸೆ ಮತ್ತು ಸೇವಾ ಒಪ್ಪಂದವನ್ನು ಈ ಮಸೂದೆ ಕಾರ್ಯಗತಗೊಳಿಸಲಿವೆ. ನ್ಯಾಯಯುತ ಬೆಲೆಯ ಚೌಕಟ್ಟಿನೊಳಗೆ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಸೇವೆಗಳನ್ನು ಒದಗಿಸುವ ಗುರಿ ಇರಿಸಿಕೊಳ್ಳಲಾಗಿದೆ. ಕೃಷಿ ವಲಯದಲ್ಲಿ ಮಹತ್ವದ ಸುಧಾರಣೆಯಾಗಲಿವೆ ಎಂದರು.

ರೈತರಿಗೆ ಮೋಸ ಮಾಡುವ ದಲ್ಲಾಳಿಗಳ ಹಾಗೂ ಖರೀದಿ ದಾರರ ಪರವಾಗಿ ವಿಪಕ್ಷಗಳು ಈ ರೈತಪರ ಕಾಯ್ದೆಯನ್ನು ವಿರೋಧಿಸುತ್ತಿವೆ. ಪ್ರತಿಪಕ್ಷಗಳ ಈ ನಿಲುವನ್ನು ಬಿಜೆಪಿ ರೈತ ಮೋರ್ಚಾ ಖಂಡಿಸುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.