ETV Bharat / state

ಮಂಗಳೂರಲ್ಲಿ ನೆಹರೂ ಜನ್ಮದಿನಾಚರಣೆ - ramanath rai talks about neharu at Mangalore

ನಮ್ಮ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಹೊಂದಬೇಕೆಂದು ಆಲಿಪ್ತ ಶೃಂಗಕೂಟವನ್ನು‌ ನೆಹರೂರವರು ಕಟ್ಟಿದರು.‌ ಇದು ನೆಹರೂ ಅವರ ದೂರದೃಷ್ಟಿತ್ವದ ಕೊಡುಗೆಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

Jawaharlal Nehru Birthday function at Mangalore
ನೆಹರೂ ಮೈದಾನದಲ್ಲಿ ನಡೆದ ಜವಾಹರಲಾಲ್ ನೆಹರೂ ಜನ್ಮದಿನಾಚರಣೆ
author img

By

Published : Nov 14, 2020, 5:16 PM IST

ಮಂಗಳೂರು: ದೇಶಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಸ್ವಾತಂತ್ರ್ಯ ಬಂದ ಸಂದರ್ಭ ನಮ್ಮಲ್ಲಿ ಏನೂ ಇರಲಿಲ್ಲ. ಆ ಬಳಿಕ ದೇಶವನ್ನು ಶಕ್ತಿಶಾಲಿ‌ ರಾಷ್ಟ್ರವನ್ನಾಗಿ ಮಾಡುವಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಆ ಬಳಿಕದ ಪ್ರಧಾನಿಗಳು ಬಹಳಷ್ಟು ಶ್ರಮಿಸಿದರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಮಾಜಿ ಸಚಿವ ರಮಾನಾಥ ರೈ

ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ ಜವಾಹರಲಾಲ್ ನೆಹರೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆಹರೂ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೇವಲ ಐದಾರು ವರ್ಷಗಳಲ್ಲಿ ಈ ದೇಶ ಇಷ್ಟು ಬಲಿಷ್ಠವಾಗಿಲ್ಲ. ಅದಕ್ಕೆ ಸುದೀರ್ಘವಾದ ಹಿನ್ನೆಲೆ ಹಾಗೂ ಹೋರಾಟವಿದೆ. ಆದ್ದರಿಂದ ಭಾರತ ಇಂದು ಪ್ರಪಂಚದಲ್ಲಿಯೇ ಗುರುತಿಸುವಂತಹ ರಾಷ್ಟ್ರವಾಗಿದೆ ಎಂದರು.

ನಮ್ಮ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಹೊಂದಬೇಕೆಂದು ಆಲಿಪ್ತ ಶೃಂಗಕೂಟವನ್ನು‌ ನೆಹರೂರವರು ಕಟ್ಟಿದರು.‌ ಇದು ನೆಹರೂ ಅವರ ದೂರದೃಷ್ಟಿತ್ವದ ಕೊಡುಗೆಯಾಗಿದೆ. ದ.ಕ ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ನೆಹರೂರವರ ಕೊಡುಗೆ ಬಹಳ ಹಿರಿದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಅನೇಕ ಸೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳು ಆಗಿನ ಸಂಸದರಾದ ಯು.ಶ್ರೀನಿವಾಸ ಮಲ್ಯ ಹಾಗೂ ನೆಹರೂ ಅವರ ಕೊಡುಗೆಯಾಗಿದೆ. ಅಂತಹ ನೆಹರೂರವರ ಹೆಸರನ್ನು ಈ ಮೈದಾನಕ್ಕೆ ಇಡಲಾಗಿದೆ. ಆದರೆ ಕೆಲವು ಪಕ್ಷದವರು ಈ ಮೈದಾನವನ್ನು ಕೇಂದ್ರ ಮೈದಾನ ಎಂದು ಕರೆಯುತ್ತಾರೆ. ಖಂಡಿತವಾಗಿಯೂ ಅವರು ದೇಶ ಪ್ರೇಮಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.