ಕಳ್ಳತನಕ್ಕೆ ಬಂದ ಮನೆಯಲ್ಲೇ ನಿದ್ರಿಸಿ ಸಿಕ್ಕಿಬಿದ್ದ ಕಳ್ಳ...! - Theft accused arrest in Uppinangady
ನಡುರಾತ್ರಿ ಉಪ್ಪಿನಂಗಡಿಯ ಉದ್ಯಮಿ ಸುದರ್ಶನ್ ಎಂಬುವವರ ಮನೆಯ ಚಾವಣಿ ಏರಿ ಹಂಚು ತೆಗೆದು ಒಳ ನುಗ್ಗಿದ ಉತ್ತರ ಭಾರತ ಮೂಲದ ಕಳ್ಳನೊಬ್ಬ, ಟಿವಿ ಸ್ಟ್ಯಾಂಡ್ನಲ್ಲಿದ್ದ ಕೀ ಗೊಂಚಲು ತೆಗೆದಿದ್ದಾನೆ. ಬಳಿಕ ಮನೆಯ ನಡು ಕೋಣೆಗೆ ತೆರಳಿ ಅಲ್ಲಿಯೇ ಆರಾಮಾಗಿ ನಿದ್ರೆಗೆ ಜಾರಿದ್ದಾನೆ.

ಉಪ್ಪಿನಂಗಡಿ (ದ.ಕ) : ಕಳ್ಳತನ ಮಾಡಲು ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳನೊಬ್ಬ, ಅದೇ ಮನೆಯ ಕೊಠಡಿಯಲ್ಲಿ ಆರಾಮವಾಗಿ ನಿದ್ರಿಸಿ ಬೆಳಗ್ಗೆ ಮನೆಯವರ ಕೈಗೆ ಸಿಕ್ಕಿಹಾಕಿಕೊಂಡ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಉದ್ಯಮಿ ಸುದರ್ಶನ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಡುರಾತ್ರಿ ಮನೆಯ ಚಾವಣಿ ಏರಿ ಹಂಚು ತೆಗೆದು ಒಳ ನುಗ್ಗಿದ ಉತ್ತರ ಭಾರತ ಮೂಲದ ಕಳ್ಳನೊಬ್ಬ, ಟಿವಿ ಸ್ಟ್ಯಾಂಡ್ನಲ್ಲಿದ್ದ ಕೀ ಗೊಂಚಲು ತೆಗೆದಿದ್ದಾನೆ. ಬಳಿಕ ಮನೆಯ ನಡು ಕೊಠಡಿಗೆ ತೆರಳಿ ಅಲ್ಲಿಯೇ ಆರಾಮಾಗಿ ನಿದ್ರೆಗೆ ಜಾರಿದ್ದಾನೆ. ಇಷ್ಟಾದರೂ ಮನೆಯವರಿಗೆ ಎಚ್ಚರ ಆಗಿರಲಿಲ್ಲ.
ಮನೆ ಯಜಮಾನ ಸುದರ್ಶನ್, ಬೆಳಗ್ಗೆ ಎದ್ದು ನೋಡಿದಾಗ ಅಪರಿಚಿತ ವ್ಯಕ್ತಿ ನಿದ್ರಿಸಿರುವುದನ್ನ ಕಂಡಿದ್ದು, ಆತನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಬಿಹಾರದ ಮಜಿಪುರ್ ಜಿಲ್ಲೆಯ ಬುಡಿ ನಗರ್ ಜಗನ್ನಾಥ್ ತಾಲೂಕಿನ ಡೊಂಬುಡಿ ಗ್ರಾಮದ ಅನಿಲ್ ಸಹಾನಿ (34) ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
TAGGED:
Theft accused arrest