ETV Bharat / state

ಕಡಬ: ಅತ್ಯಧಿಕ ಮತಗಳೊಂದಿಗೆ ಜಯ ಗಳಿಸಿದ ಶಿಕ್ಷಕ - ಗಿರಿಶಂಕರ್ ಸುಲಾಯ

ಪಾಠ ಹೇಳುವ ಮೇಷ್ಟು ಒಬ್ಬರು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿರುವ ಘಟನೆ ಕಡಬದಲ್ಲಿ ಕಂಡು ಬಂದಿದೆ.

ಗಿರಿಶಂಕರ್ ಸುಲಾಯ ಗೆಲುವಿನ ಸಂಭ್ರಮಾಚರಣೆ
ಗಿರಿಶಂಕರ್ ಸುಲಾಯ ಗೆಲುವಿನ ಸಂಭ್ರಮಾಚರಣೆ
author img

By

Published : Dec 31, 2020, 8:27 AM IST

ಕಡಬ: ಸವಣೂರು ಗ್ರಾಮ ಪಂಚಾಯತ್​ನಿಂದ ಸ್ಪರ್ಧಿಸಿ ತಾಲೂಕಿನಲ್ಲೇ ಅತ್ಯಧಿಕ ಮತಗಳೊಂದಿಗೆ ಗಿರಿಶಂಕರ್ ಸುಲಾಯ ಅವರು ಗೆಲುವು ಸಾಧಿಸಿದ್ದಾರೆ.

ಗಿರಿಶಂಕರ್ ಸುಲಾಯ ಗೆಲುವಿನ ಸಂಭ್ರಮಾಚರಣೆ

ಕಡಬ ತಾಲೂಕಿಗೆ ಸಂಬಂಧಿಸಿದಂತೆ 1,032 ಮತಗಳನ್ನು ಪಡೆದು ಗಿರಿಶಂಕರ್ ಅವರು ವಿಜಯಶಾಲಿಯಾಗಿದ್ದು, ಇವರ ವಿರುದ್ಧ ಸ್ಪರ್ಧಿಸಿದ್ದ ವಿಖ್ಯಾತ್ ಎಂಬುವವರು ಕೇವಲ 194 ಮತಗಳನ್ನು ಪಡೆದು ಪರಾಜಿತರಾದರು. ಗಿರಿಶಂಕರ್ ಅವರು ಸವಣೂರು ಪ್ರಗತಿ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯಗುರುಗಳಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿರುವ ಗಿರಿಶಂಕರ್ ಸುಲಾಯ ಅವರು, ನಾನು ಗ್ರಾಮದ ಮತ್ತು ತಾಲೂಕಿನ ಅಭಿವೃದ್ಧಿಗೆ ಉತ್ತಮವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.