ಬಂಟ್ವಾಳ (ದಕ್ಷಿಣ ಕನ್ನಡ): ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ವಾನರರಿಗೆ ಪ್ರಸಿದ್ದ. ಬಂಟ್ವಾಳ ತಾಲೂಕಿನ ದೇವಸ್ಥಾನದಲ್ಲಿ ವಾನರ ಸೇನೆಯ ತುಕುಡಿಯೇ ಇದೆ. ಭಕ್ತರಿಗೆ ಸಾಮಾಜಿಕ ಅಂತರಕ್ಕಾಗಿ ಕಾಪಾಡಲು ಹಾಕಿದ ಮಾರ್ಕ್ನಲ್ಲಿ ಕೋತಿಗಳು ಇಲ್ಲಿ ಕುಳಿತ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೇವರಿಗೆ ಮೂರು ಸೇರು ನೈವೇದ್ಯ ಸಮರ್ಪಣೆ ಮಾಡಿದ ಬಳಿಕ ಅದನ್ನು ದೇವಸ್ಥಾನದಲ್ಲಿ ಇರುವ ಚಪ್ಪಡಿ ಕಲ್ಲಿಗೆ ಹಾಕಿದರೆ, ನೂರಾರು ಕೋತಿಗಳು ಬಂದು ತಿನ್ನುತ್ತವೆ. ಭಕ್ತರು ಹಣ್ಣುಕಾಯಿ, ಬಾಳೆಹಣ್ಣು ನೀಡಿ ಸಂತೋಷ ಪಡುತ್ತಾರೆ. ಕೋತಿಗಳಿಗೆ ಆಹಾರ ಇಲ್ಲದ ವಿಷಯವನ್ನು ಕಳೆದ ತಿಂಗಳು ಈಟಿವಿ ಭಾರತದಲ್ಲಿ ಪ್ರಕಟಿಸಿದ ಬಳಿಕ ದಾನಿಗಳು ಆಹಾರ ಒದಗಿಸಿದ್ದರು.
ಇದೀಗ ಮಾರ್ಕ್ ಮಾಡಿದ ಜಾಗದಲ್ಲಿ ಇಟ್ಟ ಪ್ರಸಾದವನ್ನು ಕೋತಿಗಳು ಚೌಕಟ್ಟಿನ ಒಳಗೆ ಕುಳಿತು ತಿನ್ನುವ ಪೋಟೋ ಭಕ್ತರೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನಜನಿತವಾಗುತ್ತಿದೆ.