ಮಂಗಳೂರು: ಲಾಕ್ಡೌನ್ ಸಡಿಲಿಕೆಯ ಬೆನ್ನಲ್ಲೇ ಇಂದು ಮೊದಲ ದೇಶೀಯ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಬೆಂಗಳೂರಿನಿಂದ ಬಂದ ಇಂಡಿಗೋ 6E0279 ಸಂಜೆ 7:05 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಮುಂದಿನ ಸ್ಪೀಕರ್ ಜೆಟ್ ವಿಮಾನವು 8.55 ಕ್ಕೆ ಬಂದು ತಲುಪಿದೆ.
ದೇಶಾದ್ಯಂತ ಈಗಾಗಲೇ ವಿಮಾನಯಾನ ಆರಂಭವಾಗಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿಮಾನಯಾನ ಆರಂಭವಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಆರು ವಿಮಾನ ಹಾರಾಟ ನಡೆಸಲಿವೆ.