ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಎಂಡೋಸಲ್ಫಾನ್ ಪೀಡಿತರ ಮನೆಗೆ ಭೇಟಿ ನೀಡಿದ್ದರು. ಕಡಬದ ಆಲಂಕಾರು ಗ್ರಾಮಕ್ಕೆ ತೆರಳಿ ಎಂಡೋಸಲ್ಫಾನ್ ಸಂತ್ರಸ್ತ ಮಗು ಹಾಗೂ ಕುಟುಂಬಸ್ಥರ ಆರೋಗ್ಯದ ಬಗ್ಗೆ ವಿಚಾರಿಸಿದರು. ಡಾ. ರಾಜೇಂದ್ರ ಕೆ.ವಿ ಅವರು ಈ ಹಿಂದಿನಿಂದಲೂ ಜಿಲ್ಲೆಯ ಆಡಳಿತ ನಿರ್ವಹಣೆ ಜೊತೆಗೆ ಮಾನವೀಯತೆಯಿಂದಲೂ ಗುರುತಿಸಿಕೊಂಡಿದ್ದಾರೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು, ಗ್ರಾಮದ ಗಾಂಣತಿ ಮನೆ ಶೀನಪ್ಪ ಎಂಬುವರ ಪುತ್ರಿ ಎಂಡೋಸಲ್ಫಾನ್ ಸಂತ್ರಸ್ತೆ ಶ್ರೀಕೃಪಾ ಎಂಬ ಮಗುವನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿದರು. ಇವರ ಜೊತೆಗೆ ಪುತ್ತೂರು ಉಪ ಆಯುಕ್ತರಾದ ಗಿರಿನಂದನ್ ಅವರೂ ಇದ್ದರು. ಬಳಿಕ ಕುಂಬಾರಿಕೆ ನಡೆಸುವ ಸ್ಥಳಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡೆ ವಿರುದ್ಧ ಹಿಂದೂ ದೇವರ ಅವಮಾನಿಸಿದ ಆರೋಪ, ಮನೆ ಮೇಲೆ ದಾಳಿ