ETV Bharat / state

ಕೊನೆ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ವ್ಯಾಪಿಸಿದ ಬೆಂಕಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಕೊನೆ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ವ್ಯಾಪಿಸಿದ ಬೆಂಕಿ

ಮಂಗಳೂರು ನಗರದ ಹಂಪನಕಟ್ಟೆ ಬಳಿ ಶುಕ್ರವಾರ ಬಸ್​ ಹೊತ್ತಿ ಉರಿದಿತ್ತು. ಬಸ್​ಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಬೆಂಕಿ ಇಡೀ ಬಸ್‌ಗೆ ಆವರಿಸಿಕೊಳ್ಳುತ್ತಿದ್ದಂತೆಯೇ ನಿರ್ವಾಹಕ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಕೊನೆಯ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ಬೆಂಕಿ ವ್ಯಾಪಿಸಿದೆ. ಈ ಕುರಿತಾದ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

bus
ಬಸ್​ಗೆ ವ್ಯಾಪಿಸಿದ ಬೆಂಕಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ
author img

By

Published : Apr 9, 2022, 11:03 AM IST

ಮಂಗಳೂರು: ಮಂಗಳೂರು ನಗರದ ಹಂಪನಕಟ್ಟೆಯ ಸಿಗ್ನಲ್ ಬಳಿ ನಿನ್ನೆ ಬಸ್ ಮತ್ತು ಬೈಕ್ ಬೆಂಕಿಗಾಹುತಿಯಾದ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕರು ಬೆಂಕಿ ತಗುಲುವ ಮುಂಚೆ ಬಸ್​ನಿಂದ ಇಳಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊನೆಯ ಪ್ರಯಾಣಿಕ ಇಳಿದ ಕೇವಲ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ಬೆಂಕಿ ವ್ಯಾಪಿಸಿದೆ. ಈ ಕುರಿತಾದ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿನ್ನೆ ಹಂಪನಕಟ್ಟೆ ಸಿಗ್ನಲ್​ನಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುತ್ತಿದ್ದ ಆಸೆಲ್ ಸಿಟಿ ಬಸ್​ಗೆ ಕೆಎಸ್ ರಾವ್ ರಸ್ತೆಯಿಂದ ಅತ್ತಾವರಕ್ಕೆ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಬೈಕ್​ ಅನ್ನು ಬಸ್ ಎಳೆದುಕೊಂಡು ಹೋದ ಪರಿಣಾಮ ಬೈಕ್​ಗೆ ಬೆಂಕಿ ತಗುಲಿ ಬಳಿಕ ಬಸ್​ಗೂ ಬೆಂಕಿ ವ್ಯಾಪಿಸಿತ್ತು. ತಕ್ಷಣ ಬಸ್ ನಿಲ್ಲಿಸಿ ಬಸ್​ನಲ್ಲಿದ್ದ ಡ್ರೈವರ್, ಕಂಡಕ್ಟರ್ ಮತ್ತು ಪ್ರಯಾಣಿಕರು ಇಳಿಯಲಾರಂಭಿಸಿದರು.

ಬಸ್​ಗೆ ವ್ಯಾಪಿಸಿದ ಬೆಂಕಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಸಂದರ್ಭದಲ್ಲಿ ಪ್ರಯಾಣಿಕರೆಲ್ಲರೂ ಅವಸರದಲ್ಲಿ ಬಸ್​ ಇಳಿದಿದ್ದು, ಯಾರಿಗೂ ಅಪಾಯವಾಗಿಲ್ಲ. ಬಸ್​ನಲ್ಲಿದ್ದ ಕೊನೆಯ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ಬೆಂಕಿ ವ್ಯಾಪಿಸಿದೆ. ಈ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಇದನ್ನೂ ಓದಿ: ಮಂಗಳೂರು: ಅಪಘಾತದಿಂದ ಹೊತ್ತಿ ಉರಿದ ಬಸ್-ಬೈಕ್, ಸಿಸಿಟಿವಿ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.