ETV Bharat / state

ಬಂಟ್ವಾಳದಲ್ಲೂ ಉಗ್ರರ ಜಾಡು: ಆರೋಪಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಶಿವಮೊಗ್ಗ ಪೊಲೀಸರು

ಬಂಟ್ವಾಳದ ನಾವೂರು ಗ್ರಾಮದ ಸುಲ್ತಾನ್ ಕಟ್ಟೆ, ಅಗ್ರಹಾರ ಪರಿಸರದಲ್ಲಿ ಹಾಗೂ ನದಿ ಬದಿಯ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಆರೋಪಿಯೊಂದಿಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

terror-trail-in-bantwal-shivamogga-police-conducted-site-inspection-with-accused
ಬಂಟ್ವಾಳದಲ್ಲೂ ಉಗ್ರ ಜಾಡು: ಆರೋಪಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಶಿವಮೊಗ್ಗ ಪೊಲೀಸರು
author img

By

Published : Sep 21, 2022, 8:13 PM IST

ಬಂಟ್ವಾಳ (ದಕ್ಷಿಣ ಕನ್ನಡ): ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಶಂಕೆಯಲ್ಲಿ ಬಂಧಿತ ಆರೋಪಿ ಮಂಗಳೂರಿನ ಮಾಝ್ ಮುನೀರ್ ಅಹ್ಮದ್ (22)ನನ್ನು ಬುಧವಾರ ಸಂಜೆ ಶಿವಮೊಗ್ಗ ಪೊಲೀಸರು ಬಂಟ್ವಾಳದ ನಾವೂರಿಗೆ ಕರೆ ತಂದು ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ.

ನೇತ್ರಾವತಿ ನದಿ ಕಿನಾರೆಯಲ್ಲಿ ಹಾಗೂ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಲ್ಲಿ ಈತ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಶಂಕೆಯಿಂದ ಈ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ. ಮಂಗಳೂರಿನಿಂದ ಈತನನ್ನು ಬಂಟ್ವಾಳಕ್ಕೆ ಕರೆತಂದ ಪೊಲೀಸರು ರಾತ್ರಿವರೆಗೂ ಪರಿಶೀಲನೆ ನಡೆಸಿದರು.

ಶಂಕಿತ ಉಗ್ರ ನಿರ್ಜನ ಪ್ರದೇಶದಲ್ಲಿ ಸ್ಫೋಟದ ರಿಹರ್ಸಲ್ ನಡೆಸುತ್ತಿರುವ ಶಂಕೆ ಇದ್ದ ಕಾರಣ ಶ್ವಾನದಳ ಮತ್ತು ಸ್ಫೋಟಕ ಪತ್ತೆ ತಜ್ಞರೊಂದಿಗೆ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಸ್ಥಳೀಯ ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಇದನ್ನೂ ಓದಿ: ಶಿವಮೊಗ್ಗಕ್ಕೆ ಉಗ್ರರ ನಂಟು, ಇಬ್ಬರ ವಿರುದ್ಧ ಯುಎಪಿಎ ಕೇಸ್ ದಾಖಲು : ಎಸ್​ಪಿ ಲಕ್ಷ್ಮೀ ಪ್ರಸಾದ್

ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಈ ಪರಿಶೀಲನೆ ನಡೆದಿದೆ. ನಾವೂರು ಗ್ರಾಮದ ಸುಲ್ತಾನ್ ಕಟ್ಟೆ, ಅಗ್ರಹಾರ ಪರಿಸರದಲ್ಲಿ ಹಾಗೂ ನದಿ ಬದಿಯ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಈ ಪರಿಶೀಲನೆ ನಡೆಸಲಾಗಿದೆ.

ಬಂಧಿತ ಶಂಕಿತ ಉಗ್ರ ಮಾಜ್ ಮೊಬೈಲ್​ನಲ್ಲಿ ಸ್ಪೋಟಕ ಮಾಹಿತಿ ದೊರೆತಿದೆ. ಮಾಜ್ ಆನ್​ಲೈನ್ ಮೂಲಕ ಮೊಬೈಲ್ ರೋಬಟ್ ಡಿಪ್ಲೋಮಾ ಕೋರ್ಸ್​ನ್ನು ಪಡೆಯುತ್ತಿದ್ದ. ರೋಬೊಟ್ ಮೂಲಕ ಬಾಂಬ್ ಬ್ಲಾಸ್ಟ್ ಮಾಡುವುದು ಕುರಿತು ಅಧ್ಯಯನ ಮಾಡುತ್ತಿದ್ದ. ಹೀಗೆ ಚಿಕ್ಕ ವಯಸ್ಸಿನಲ್ಲೇ ವಿಧ್ವಂಸಕ ಕೃತ್ಯಗಳ ತರಬೇತಿಗೆ ಮುಂದಾಗಿದ್ದ ಎಂಬ ಮಾಹಿತಿ ಸಹ ಲಭ್ಯವಾಗಿದೆ.

ಇದನ್ನೂ ಓದಿ: ಬಾಂಬ್ ತಯಾರಿಸಿ ಪ್ರಾಯೋಗಿಕ ಸ್ಫೋಟಕ್ಕೆ ತುಂಗಾ ನದಿ ಬಳಸಿಕೊಂಡ ಶಂಕಿತ ಉಗ್ರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.