ಮಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡದಂತೆ ಜಾರಿಗೊಳಿಸಿರುವ ನಿರ್ಬಂಧಗಳನ್ನು ಸಡಿಲಿಸಿ ನಾಳೆಯಿಂದ 3ನೇ ಹಂತದ ಅನ್ಲಾಕ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಾಲ್ಗಳು ಸೇರಿದಂತೆ ದೇವಾಲಯಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ.
ಈ ಮೂಲಕ ಎರಡು ತಿಂಗಳ ಬಳಿಕ ಭಕ್ತರಿಗೆ ನಾಳೆಯಿಂದ ದೇವಾಲಯ ಪ್ರವೇಶಿಸಲು ಅವಕಾಶ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಇಂದಿನಿಂದಲೇ ಸಿದ್ಧತೆ ನಡೆಯುತ್ತಿದೆ.
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನವನ್ನು ಸಂಪೂರ್ಣ ಸ್ವಚ್ಚ ಮಾಡಲಾಗುತ್ತಿದ್ದು, ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿದೆ. ದೇವಳದ ಸಿಬ್ಬಂದಿ ದೇವಸ್ಥಾನದ ಒಳಾಂಗಣ, ಹೊರಾಂಗಣ, ಅನ್ನಛತ್ರಗಳಲ್ಲೂ ಸ್ಯಾನಿಟೈಸೆಷನ್ ಮಾಡಿದ್ದಾರೆ.
ನಾಳೆ ಸೋಮವಾರವಾಗಿರುವ ಕಾರಣ ಭಕ್ತರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ. ಆದರೆ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥೆ ಕಲ್ಪಿಸಿದೆ.
ಇದನ್ನೂ ಓದಿ: ಶೇ.80ರಷ್ಟು ವ್ಯಾಕ್ಸಿನೇಷನ್ ಮಾಡಿ.. ಸರ್ಕಾರಕ್ಕೆ ಮೂರು ತಿಂಗಳ ಡೆಡ್ಲೈನ್ ನೀಡಿದ್ರು ಡಿಕೆಶಿ