ಮಂಗಳೂರು: ರೋಗಗ್ರಸ್ಥ ಉದ್ಯಮಗಳನ್ನು ಪುನಶ್ಚೇತನ ಮಾಡುವಂತೆ ಜೆಎನ್ಯು ವಿಶ್ವವಿದ್ಯಾನಿಲಯವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳೂರು ಲಿಟರೆಸಿ ಫೌಂಡೇಶನ್ ಆಯೋಜಿಸಿದ್ದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ 'ಜೆಎನ್ಯು - ವಾಟ್ ಈಸ್ ದ ರೈಟ್ ಇನ್ ದ ಲೆಫ್ಟ್' ಎಂಬ ವಿಚಾರ ಕುರಿತು ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ತೆರಿಗೆ ದುಡ್ಡಿನಲ್ಲಿ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಸಮಾಜಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಇಡೀ ವರ್ಷಕ್ಕೆ 240 ರೂ. ಟ್ಯೂಷನ್ ಶುಲ್ಕ, 9 ರೂಪಾಯಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರ್ಕಾರ ಪ್ರತಿಯೊಂದು ವಿದ್ಯಾರ್ಥಿಗೆ 7 ಲಕ್ಷ ರೂ. ವ್ಯಯಿಸುತ್ತದೆ. ಅವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಹೀಗಿರುವಾಗ ಸರ್ಕಾರ ಯಾಕೆ ಹಣ ಹೂಡಬೇಕು ಎಂದು ಪ್ರಶ್ನಿಸಿದರು. ಈ ಕಾರಣದಿಂದಾಗಿ ಜೆಎನ್ಯು ಪುನರ್ ನಿರ್ಮಾಣ ಮಾಡಬೇಕು. ಆಡಳಿತ, ಆರ್ಥಿಕ ವಿಚಾರಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂದಿದ್ದಾರೆ.