ETV Bharat / state

ಕಾಂಗ್ರೆಸಿಗರಿಗೆ ಗಾಂಧಿ ಬೇಕೇ ಹೊರತು ಅವರ ಆದರ್ಶವಲ್ಲ: ತೇಜಸ್ವಿನಿ ರಮೇಶ್ - ಪ್ರಧಾನಿ ನರೇಂದ್ರ ಮೋದಿ

ರೈತರ ಜೊತೆ 18 ಬಾರಿ ಮಾತುಕತೆ ಮಾಡಿದ್ದೆವು. ರೈತರನ್ನು ದಾರಿ ತಪ್ಪಿಸುವ ಮೂಲಕ ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆಯುವ ಹಾಗೂ ಭಾರತ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಕಾರ್ಯತಂತ್ರಗಳು ನಡೆಯುತ್ತಿದೆ. ಇಂತಹ ಚಳವಳಿಗಳನ್ನು ರೈತರ ಕೈಯಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

Tejashwi Ramesh
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್
author img

By

Published : Oct 7, 2021, 8:45 AM IST

ಬೆಳ್ತಂಗಡಿ (ದ.ಕ): ಕಾಂಗ್ರೆಸಿಗರಿಗೆ ಗಾಂಧಿ ಬೇಕೇ ಹೊರತು ಅವರ ಆದರ್ಶವಲ್ಲ. ಸ್ವಚ್ಛ ಭಾರತ್, ಗ್ರಾಮ ನೈರ್ಮಲ್ಯ ಮೂಲಕ ಅವರ ಆದರ್ಶವನ್ನು ಬಿಜೆಪಿ ಪಾಲಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ತೇಜಸ್ವಿನಿ ರಮೇಶ್ ಹೇಳಿದ್ದಾರೆ.

ಬೆಳ್ತಂಗಡಿಯ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನ ವಿಚಾರ ಸಂಕೀರ್ಣದಲ್ಲಿ ಭಾಗಿಯಾಗಿ ಮಾತನಾಡಿದರು.

ಮೋದಿಯವರ ಆಡಳಿತದಲ್ಲಿ ದೇಶದ ರಕ್ಷಣೆಯ ಜತೆಗೆ ದೇಶದ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಾಗಿದೆ. ನಾವು ಪ್ರತಿಯೊಬ್ಬರು ಮೋದಿಯವರ ಹಾಗೆ ಕೆಲಸ ಮಾಡಿರುವ ಪರಿಣಾಮ ಈಗ ನಾವು ಅಧಿಕಾರದಲ್ಲಿದ್ದೇವೆ. ಅಧಿಕಾರಕ್ಕೆ ಬಂದ ಮೇಲೆ ಜಲ ಮಾರ್ಗ, ವಾಯು ಮಾರ್ಗ, ಭೂಮಾರ್ಗ ಸುರಕ್ಷಿತ ಮಾಡಿದ್ದೇವೆ. ಜತೆಗೆ ಅಕ್ರಮ ಶಸ್ತ್ರಾಸ್ತ್ರ, ಭಯೋತ್ಪಾದಕ ತರಬೇತಿಯನ್ನು ನಿಲ್ಲಿಸಲಾಗಿದೆ ಎಂದರು.

ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ರೈತರ ಜೊತೆ 18 ಬಾರಿ ಮಾತುಕತೆ ಮಾಡಿದ್ದೆವು. ರೈತರನ್ನು ದಾರಿ ತಪ್ಪಿಸುವ ಮೂಲಕ ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆಯುವ ಹಾಗೂ ಭಾರತ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಕಾರ್ಯತಂತ್ರಗಳು ನಡೆಯುತ್ತಿದೆ. ಇಂತಹ ಚಳವಳಿಗಳನ್ನು ರೈತರ ಕೈಯಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ. ಕಳ್ಳ ನಿದ್ದೆ ಮಾಡುವವರನ್ನು ಎದ್ದೇಳಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಮಂಡಲ ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಮತ್ತು ಗಣೇಶ್ ಗೌಡ, ಕಾರ್ಯದರ್ಶಿ ಪ್ರಶಾಂತ್ ಕೆ. ಪಾರೆಂಕಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್ ಮೊದಲಾದವರಿದ್ದರು.

ಇದನ್ನೂ ಓದಿ: ನೂತನ ಶಿಕ್ಷಣ ನೀತಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳ: ಸಚಿವ ಡಾ.ಅಶ್ವತ್ಥ್​ ನಾರಾಯಣ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.