ETV Bharat / state

ಶಿಕ್ಷಕ ವರ್ಗ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ: ಶಾಸಕ ಪೂಂಜ - Teachers work during covid

ಶಿಕ್ಷಕ ವರ್ಗ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಶಾಸಕರಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಶಾಸಕ ಹರೀಶ್ ಪೂಂಜ
ಶಾಸಕ ಹರೀಶ್ ಪೂಂಜ
author img

By

Published : Oct 4, 2020, 11:17 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಕೋವಿಡ್ ಸಂದರ್ಭದಲ್ಲೂ ತಾಲೂಕಿನ ಶಿಕ್ಷಕ ವರ್ಗವು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಶಾಸಕರಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಬೆಳ್ತಂಗಡಿ ಮತ್ತು‌ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಬೆಳ್ತಂಗಡಿ ವತಿಯಿಂದ ಕೋವಿಡ್ -19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅನುದಾನ ರಹಿತ ಶಾಲಾ ಶಿಕ್ಷಕರು, ಸಿಬ್ಬಂದಿ ಮತ್ತು ಪ್ರೌಢಶಾಲಾ ಬಿಸಿಯೂಟ ಸಿಬ್ಬಂದಿಗೆ ಅ.4 ರಂದು ಶ್ರೀ.ಧ.ಮಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕ ನೆರವು ಹಾಗೂ ಸಾಧಕರಿಗೆ ಸಮ್ಮಾನ ನೆರವೇರಿಸಿ ಮಾತನಾಡಿದರು.

ಶಿಕ್ಷಕ ವರ್ಗ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ:-ಶಾಸಕ ಹರೀಶ್ ಪೂಂಜ

ಶಿಕ್ಷಕರ ಆದರ್ಶದಿಂದ ಜಗತ್ತು ಅನೇಕ ಸಾಧಕರನ್ನು ಪರಿಚಯಿಸಿದೆ. ನಮ್ಮ ಸಾಧನೆ ಹಿಂದೆ ಗುರುವಿನ ಅಚಲ ನಂಬಿಕೆ ಜಾಗೂ ಕರ್ತವ್ಯ ಸೇವೆ ಗಮನಾರ್ಹ. ಜಗತ್ತಿಗೆ ಗುರು ತತ್ವ ನೀಡಿದ ದೇಶ ಭಾರತವಾದ್ದರಿಂದ ನಾವು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಶಿಕ್ಷಕರು ಕೋವಿಡ್ ಸಂದರ್ಭದಲ್ಲೂ ನೀಡಿದ ಸೇವೆ ಅಪಾರ. ಈ ನೆಲೆಯಲ್ಲಿ ಸರ್ಕಾರವೂ ಪೂರ್ಣ ರೀತಿಯ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆ ಆರಂಭಿಸಲು ನಾನು ಸರ್ಕಾರವನ್ನು ಈಗಾಗಲೇ ಒತ್ತಾಯಿಸಿದ್ದೇನೆ. ಶಿಕ್ಷಣ ವ್ಯವಸ್ಥೆ ಭವಿಷ್ಯದ ಬುನಾದಿಯಾಗಿರುವುದರಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕುಬ್ ಎಸ್. ಸಮ್ಮಾನ ಸ್ವೀಕರಿಸಿ ಮಾತನಾಡಿ, ಜೀವನದ ಸಾಧನೆಯ ಸ್ವರೂಪಗಳಲ್ಲಿ ಹಲವು ಪ್ರೇರಕ ಸಂಗತಿಗಳು ಬಂದೊದಗುತ್ತವೆ. ನಾವು ಅವಕಾಶಗಳನ್ನು ಸದ್ಬಳಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಇಂದಿನ ದಿನ ಬದುಕಿನಲ್ಲಿ ಬಂದೊದಗಿರುವ ಅದ್ಭುತ ಹಾಗೂ ರೋಮಾಂಚನ ಕ್ಷಣ. ಸಾಧನೆಯ ಹಾದಿಯಲ್ಲಿ ಅವಮಾನವನ್ನು ಅಭಿಮಾನದಿಂದ ಸ್ವೀಕರಿಸಿ ಮುನ್ನಡೆದಾಗ ಯಶಸ್ಸು ನಿಮ್ಮದಾಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.