ETV Bharat / state

ಮಕ್ಕಳಿಗಾಗಿ ವಿನೂತನ ಪ್ರಯತ್ನ.. ಪ್ರಾಥಮಿಕ ಶಾಲಾ ಪದ್ಯಗಳಿಗೆ ರಾಗ ಸಂಯೋಜಿಸಿ ಹೆಜ್ಜೆಹಾಕಿದ ಶಿಕ್ಷಕಿ - ಪ್ರಾಥಮಿಕ ಶಾಲೆ

ಆನ್​​ಲೈನ್ ಪಾಠಗಳು ಅರ್ಥವಾಗುವುದಿಲ್ಲ ಎಂಬ ಮಕ್ಕಳ ಹಾಗೂ ಪೋಷಕರ ಸಮಸ್ಯೆಗೆ ಶಿಕ್ಷಕಿಯೊಬ್ಬರು ತಾತ್ಕಾಲಿಕ ಪರಿಹಾರ ನೀಡಿದ್ದಾರೆ. ಪ್ರಾಥಮಿಕ ಶಾಲೆಯ ಕನ್ನಡದ 6 ಪಠ್ಯಗಳಿಗೆ ಹಾಡಿನ ರೂಪ ನೀಡಿ ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ.

teacher-composed-song-for-primary-school-poetries-to-easily-understands-students
ಪ್ರಾಥಮಿಕ ಶಾಲಾ ಪದ್ಯಗಳಿಗೆ ರಾಗ ಸಂಯೋಜಿಸಿ ಮಕ್ಕಳ ಕಲಿಕೆಗೆ ನೆರವಾದ ಶಿಕ್ಷಕಿ
author img

By

Published : Sep 3, 2021, 11:08 AM IST

ಮಂಗಳೂರು: ಕೊರೊನಾ ಕಾರಣದಿಂದಾಗಿ ಶಾಲೆಗಳು ಆನ್​ಲೈನ್​ನಲ್ಲೇ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಡುವೆ ಆನ್​​ಲೈನ್​ ತರಗತಿಗಳು ಮಕ್ಕಳ ಕಲಿಕೆಗೆ ನೇರ ತರಗತಿಯಷ್ಟು ಪರಿಣಾಮಕಾರಿಯಲ್ಲ ಎಂಬಂತಹ ಮಾತುಗಳು ಕೇಳಿ ಬಂದವು. ಈ ನಡುವೆ ಮಕ್ಕಳಿಗೆ ಆನ್​ಲೈನ್​ ಕ್ಲಾಸ್​​​ನಲ್ಲಿ ಪಾಠಗಳನ್ನ ಹಾಡಿನ ಮೂಲಕ ಪ್ರಸ್ತುತ ಪಡಿಸುವ ಕಾರ್ಯಕ್ಕೆ ಶಿಕ್ಷಕರು ಮುಂದಾಗಿದ್ದಾರೆ.

ಮಂಗಳೂರಿನ ಶಿಕ್ಷಕಿಯೋರ್ವರು ಶಾಲೆಯ ಪದ್ಯಗಳಿಗೆ ಸಂಗೀತ ಸಂಯೋಜಿಸಿ ಹೆಜ್ಜೆ ಹಾಕಿದ್ದಾರೆ. ಈ ಮೂಲಕ‌ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಹುರುಪು ತುಂಬಿದ್ದಾರೆ.

ಪ್ರಾಥಮಿಕ ಶಾಲಾ ಪದ್ಯಗಳಿಗೆ ರಾಗ ಸಂಯೋಜಿಸಿ ಮಕ್ಕಳ ಕಲಿಕೆಗೆ ನೆರವಾದ ಶಿಕ್ಷಕಿ

ಮಂಗಳೂರಿನ ನಳಂದ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಶಿಕ್ಷಕಿ ಮಂಜುಳಾ ಜನಾರ್ದನ ಅವರು ಈ ರೀತಿಯ ಪ್ರಯೋಗ ಮಾಡಿದ್ದಾರೆ. ಅವರ ಪ್ರಯತ್ನದಿಂದಾಗಿ 3 ರಿಂದ 6ನೇ ತರಗತಿವರೆಗಿನ ಕನ್ನಡ ಪಾಠದ ಆರು ಪದ್ಯಗಳು 'ಕಲಿ ನಲಿ ಆಡು: ವಾರಕ್ಕೊಂದು ಹಾಡು' ಶೀರ್ಷಿಕೆಯ ಮೂಲಕ ಯೂಟ್ಯೂಬ್ ಗೆ ಅಪ್ಲೋಡ್ ಆಗಿದೆ.

ಇನ್ನು ಆರು ಹಾಡುಗಳು ತಯಾರಾಗಿದ್ದು ವಾರಕ್ಕೊಂದರಂತೆ ಮೂಂದಿನ‌ ಆರು ವಾರಗಳಲ್ಲಿ ಈ ವಿಡಿಯೋಗಳು ಯೂಟ್ಯೂಬ್​​​ಗೆ ಅಪ್ಲೋಡ್ ಆಗಲಿವೆ. ಈ ಮೂಲಕ ವಿದ್ಯಾರ್ಥಿಗಳು ಪಾಠವನ್ನು ಸುಲಭವಾಗಿ ಗ್ರಹಿಸಲು ಸಹಕಾರಿಯಾಗಿದೆ.

ಪ್ರಾಥಮಿಕ ಶಾಲಾ ಪದ್ಯಗಳಿಗೆ ರಾಗ ಸಂಯೋಜನೆ

ಇಲ್ಲಿಯವರೆಗೆ ಎಲ್​​ಕೆಜಿ, ಯುಕೆಜಿ ಕಲಿ - ನಲಿ ಪಾಠಗಳ ವಿಡಿಯೋಗಳು ಮಾತ್ರ ಲಭ್ಯವಿದ್ದಿತ್ತು‌. ಆದರೆ, ಪ್ರಾಥಮಿಕ ಶಾಲೆಯ ವಿಡಿಯೋ ಪಾಠ ಇದೇ ಮೊದಲ ಬಾರಿಗೆ ಆಗಿದೆಯಂತೆ. ಮಂಜುಳಾ ಜನಾರ್ದನ ಅವರ ಈ ಕಾರ್ಯಕ್ಕೆ ಅವರ 2-3 ಹಳೆಯ ವಿದ್ಯಾರ್ಥಿನಿಯರು ಹಾಗೂ 7 ಮಂದಿ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.

ಪ್ರಾಥಮಿಕ ಶಾಲಾ ಪದ್ಯಗಳಿಗೆ ರಾಗ ಸಂಯೋಜನೆ

ಸ್ವತಃ ಮಂಜುಳಾ ಜನಾರ್ದನ ಅವರೇ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಹಾಡಿನ ಸಾಹಿತ್ಯಕ್ಕೆ ಪೂರಕವಾದ ಹೊರಾಂಗಣ, ಒಳಾಂಗಣ ಚಿತ್ರೀಕರಣ ‌ಮಾಡಿದ್ದಾರೆ. ಈ ಹಾಡು - ನೃತ್ಯದ ಮೂಲಕದ ಪಾಠವು ಮಕ್ಕಳಿಗೆ ಸುಲಭ ಅರ್ಥವಾಗಲಿದೆ. ಒಂದೊಂದು ವಿಡಿಯೋ 3-4 ನಿಮಿಷಗಳ ಸಂಯೋಜನೆಯಾಗಿದ್ದು, ಮಂಜುಳಾ ಉಡುಪಿ ಹೆಸರಿನ ಯೂಟ್ಯೂಬ್​​​ನಲ್ಲಿ ಅಪ್ಲೋಡ್ ಆಗಿದೆ.

ಓದಿ: ಮಂಗಳೂರು: ಕ್ರೀಡಾ ಗಾಯಾಳುಗಳ ಚಿಕಿತ್ಸೆಗೆ ಒಪಿಡಿ ಆರಂಭಿಸಿದ ಕೆಎಂಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.