ETV Bharat / state

ನದಿಗೆ ಉರುಳಿದ ಡಾಂಬರು ಟ್ಯಾಂಕರ್: ಅಪಾಯದಿಂದ ಚಾಲಕರು ಪಾರು - ಮಂಗಳೂರು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಸುಮಾರು 100 ಅಡಿ ಆಳಕ್ಕೆ ನದಿಗೆ ಉರುಳಿ ಬಿದ್ದಿದೆ.

Tanker accident
ನದಿಗೆ ಉರುಳಿದ ಡಾಂಬರು ಟ್ಯಾಂಕರ್
author img

By

Published : Dec 23, 2020, 7:33 PM IST

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಸುಮಾರು ನದಿಗೆ ಉರುಳಿದೆ.

ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅರ್ಧದಷ್ಟು ಡಾಂಬರು ಸೋರಿಕೆಯಾಗಿ ನದಿ ನೀರಿನಲ್ಲಿ ಸೇರಿಕೊಂಡಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಬೆದ್ರೋಡಿಯಲ್ಲಿ ಈ ಹಿಂದೆ ಇದ್ದ ತೂಗು ಸೇತುವೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ನದಿ ಪಾತ್ರದತ್ತ ಸಂಚರಿಸಿ 100 ಅಡಿ ದೂರದಲ್ಲಿನ ನೇತ್ರಾವತಿ ನದಿಯಲ್ಲಿ ಮಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಓದಿ:ಗ್ಯಾಸ್ ಟ್ಯಾಂಕರ್ ಪಲ್ಟಿ: ಇಬ್ಬರ ಸ್ಥಿತಿ ಗಂಭೀರ

ಚಾಲಕರಿಬ್ಬರು ಅಪಾಯದಿಂದ ಪಾರು: ಟ್ಯಾಂಕರ್‌ನಲ್ಲಿದ್ದ ಚಾಲಕರಾದ ಸುಳ್ಯದ ಅಬ್ದುಲ್ ಖಾದರ್ ಹಾಗೂ ಮಲಂಗಾವ್ ನಿವಾಸಿ ಮಲ್ಲಿಕಾರ್ಜುನ್ ಎಂಬುವರು ಟ್ಯಾಂಕರ್ ಪಲ್ಟಿ ಆಗುತ್ತಿದ್ದಂತೆ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.