ETV Bharat / state

ಸುರತ್ಕಲ್ ಟೋಲ್ ಗೇಟ್ ರದ್ದು ಆದೇಶವಾದರೂ 30ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

author img

By

Published : Nov 26, 2022, 1:18 PM IST

ಎನ್​​ಐಟಿಕೆ ಟೋಲ್ ಗೇಟ್ ರದ್ದು ಬಗ್ಗೆ ಆದೇಶವಾಗಿ 14 ದಿನಗಳಾದರೂ ಟೋಲ್ ಸಂಗ್ರಹವನ್ನು ಇನ್ನೂ ನಿಲ್ಲಿಸಿಲ್ಲ.‌ ಬಿಜೆಪಿ ಸರ್ಕಾರವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ-ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.

Surathkal toll gate Controversy
ಸುರತ್ಕಲ್ ಟೋಲ್‌ ಗೇಟ್‌ ವಿವಾದ: ಅನಿರ್ದಿಷ್ಟಾವಧಿ ಧರಣಿ

ಮಂಗಳೂರು: ಸುರತ್ಕಲ್​​ನ ಎನ್​​ಐಟಿಕೆ ಟೋಲ್ ಗೇಟ್ ರದ್ದು ಮಾಡಲು ಆದೇಶವಾದರೂ ಟೋಲ್ ಗೇಟ್ ಸನಿಹ ಅನಿರ್ದಿಷ್ಟಾವಧಿ ಧರಣಿ 30 ನೇ ದಿನಕ್ಕೆ ಕಾಲಿರಿಸಿದೆ. ಎನ್​​ಐಟಿಕೆ ಟೋಲ್ ಗೇಟ್ ಅಕ್ರಮವಾಗಿದ್ದು, ಇದನ್ನು ತೆರವುಗೊಳಿಸಬೇಕೆಂದು ಅ.28 ರಿಂದ ಹಗಲು ರಾತ್ರಿ ಧರಣಿ ಆರಂಭಿಸಲಾಗಿತ್ತು. ಇದಕ್ಕೂ ಮೊದಲು ಹೋರಾಟಗಾರರು ಟೋಲ್ ಗೇಟ್​​ಗೆ ಮುತ್ತಿಗೆ ಹಾಕಿ ಕೆಲಕಾಲ ಟೋಲ್ ಸಂಗ್ರಹ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

30ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ: ಟೋಲ್ ಗೇಟ್ ವಿರೋಧಿ ಹೋರಾಟಕ್ಕೆ ಮಣಿದು ಸುರತ್ಕಲ್ ಎನ್‌ಐಟಿಕೆ ಟೋಲ್ ಗೇಟ್​​ ರದ್ದು ಮಾಡಿ ಆದೇಶ ಹೊರಡಿಸಲಾಗಿತ್ತು. ನ.14 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಟ್ಚೀಟ್ ಮಾಡಿ ಟೋಲ್ ಗೇಟ್ ರದ್ದಾದ ಮಾಹಿತಿ ಹಂಚಿಕೊಂಡಿದ್ದರು. ಈ ಬಗ್ಗೆ ಆದೇಶವಾಗಿ 14 ದಿನಗಳಾದರೂ ಟೋಲ್ ಸಂಗ್ರಹ ನಿಂತಿಲ್ಲ. ಈ ಕಾರಣದಿಂದಾಗಿ ಎನ್​ಐಟಿಕೆ ಟೋಲ್ ಗೇಟ್ ವಿರುದ್ಧ ಹಗಲು ರಾತ್ರಿ ಧರಣಿ ಮುಂದುವರಿಯುತ್ತಿದೆ. ಕಳೆದ 30 ದಿನಗಳಿಂದ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ

ಇದನ್ನೂ ಓದಿ: ಬಹು ದಿನಗಳ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ರದ್ದು: ನಳಿನ್ ಕುಮಾರ್ ಕಟೀಲ್ ಟ್ವೀಟ್

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, 'ಎನ್​​ಐಟಿಕೆ ಟೋಲ್ ಗೇಟ್ ರದ್ದು ಬಗ್ಗೆ ಆದೇಶವಾಗಿ 14 ದಿನಗಳಾದರೂ ಟೋಲ್ ಸಂಗ್ರಹವನ್ನು ಇನ್ನೂ ನಿಲ್ಲಿಸಿಲ್ಲ.‌ ಬಿಜೆಪಿ ಸರ್ಕಾರವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಟೋಲ್ ಸಂಗ್ರಹ ಕೊನೆಯಾಗುವವರೆಗೆ ಧರಣಿ ಮುಂದುವರಿಸಲಾಗುವುದು. ಇಲ್ಲಿ ರದ್ದುಪಡಿಸಿದ ಟೋಲ್ ಗೇಟ್​​ನ್ನು ಹೆಜಮಾಡಿಯಲ್ಲಿ ವಿಲೀನಗೊಳಿಸಿ ಇದೀಗ ಆದೇಶ ಹೊರಡಿಸಿರುವುದರಿಂದ ಹೆಜಮಾಡಿಯಲ್ಲಿ ಇಲ್ಲಿನ ದರವನ್ನು ಸೇರಿಸಿ ಸುಂಕ ವಸೂಲಿ ಮಾಡಿದರೆ ಅಲ್ಲಿ ಹೋರಾಟ ಮುಂದುವರಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸುರತ್ಕಲ್‌ ಟೋಲ್ ರದ್ದು- ಕಟೀಲ್; ಹಣ ಸಂಗ್ರಹ ಸ್ಥಗಿತಗೊಳ್ಳುವವರೆಗೂ ಹೋರಾಟ-ಮುನೀರ್ ಕಾಟಿಪಳ್ಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.