ಮಂಗಳೂರು(ದಕ್ಷಿಣ ಕನ್ನಡ): ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರ ಸಹೋದರ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ವಕೀಲರಾಗಿದ್ದ ಫಾರೂಕ್ (49) ಮೃತಪಟ್ಟವರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬೆಳುವಾಯಿ ನಿವಾಸಿಯಾಗಿದ್ದಾರೆ.
ಇದೀಗ ಹೈಕೋರ್ಟ್ ವಕೀಲರಾಗಿರುವ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮೂಡಬಿದಿರೆಗೆ ತಂದು ಅಂತ್ಯ ಕ್ರಿಯೆ ನಡೆಸಲಾಗುತ್ತದೆ.
ಇದನ್ನೂ ಓದಿ: ಜರ್ಮನಿಯಲ್ಲಿ ದಾವಣಗೆರೆ ಮೂಲದ ಎಂಟೆಕ್ ವಿದ್ಯಾರ್ಥಿ ಸಾವು: ಕುಟುಂಬಸ್ಥರ ಆಕ್ರಂದನ