ETV Bharat / state

ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಯಶಸ್ವಿ ಮರಳು ಪೂರೈಕೆ: ಕಟ್ಟಡ ಕಾಮಗಾರಿಗಳು ಚುರುಕು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಮತ್ತು ನಿರ್ದಿಷ್ಟ ಹಾಗೂ ನಿಗದಿತವಾಗಿ ಜನಸಾಮಾನ್ಯರಿಗೆ ಮರಳನ್ನು ಪೂರೈಸಲು ಆ್ಯಪ್ ಮೂಲಕ ನೀಡಲಾಗುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈವರೆಗೆ 11,466 ಬೇಡಿಕೆಗಳು ಸ್ವೀಕಾರವಾಗಿದ್ದು, 11,028 ಬೇಡಿಕೆಗಳಿಗೆ ಮರಳನ್ನು ಆ್ಯಪ್ ಮೂಲಕ ಪೂರೈಸಲಾಗಿದೆ.

ಮಂಗಳೂರಿನಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಯಶಸ್ವಿಯಾಗಿ ಮರಳು ಪೂರೈಕೆ
author img

By

Published : Nov 19, 2019, 11:53 AM IST

ಮಂಗಳೂರು: ನಗರದಲ್ಲಿ ನಿರ್ವಹಿಸುತ್ತಿರುವ ಸ್ಯಾಂಡ್ ಬಜಾರ್ ಆ್ಯಪ್​ ಸಹಾಯದಿಂದ ಯಶಸ್ವಿಯಾಗಿ ಬೇಡಿಕೆದಾರರಿಗೆ ಮರಳು ಪೂರೈಕೆಯಾಗುತ್ತಿದ್ದು, ಈವರೆಗೆ 11,466 ಬೇಡಿಕೆಗಳು ಸ್ವೀಕಾರವಾಗಿದ್ದು, 11,028 ಬೇಡಿಕೆಗಳಿಗೆ ಮರಳನ್ನು ಆ್ಯಪ್ ಮೂಲಕ ನೀಡಲಾಗಿದೆ.

ಮಂಗಳೂರಿನಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಯಶಸ್ವಿಯಾಗಿ ಮರಳು ಪೂರೈಕೆ

ದ.ಕ.ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳನ್ನು ಪೂರೈಸಲು ಹಾಗೂ ನಿರ್ದಿಷ್ಟ ಮತ್ತು ನಿಗದಿತವಾಗಿ ಜನಸಾಮಾನ್ಯರಿಗೆ ಮರಳನ್ನು ಪೂರೈಸಲು ಆ್ಯಪ್ ಮೂಲಕ ನೀಡಲಾಗುವ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು 48 ಗಂಟೆಗಳಲ್ಲಿ ಮರಳು ಪೂರೈಸುವ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಸಿಆರ್ ಜಡ್ ಮರಳು ದಿಬ್ಬ ಹಾಗೂ ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ದೊರಕಿರುವ ಮರಳನ್ನು ಬೇಡಿಕೆದಾರರಿಗೆ ಪೂರೈಸಲಾಗುತ್ತಿದೆ. ಸಿಆರ್ ಜಡ್ ಮರಳಿಗೆ ಪ್ರತಿ ಲೋಡ್ ಗೆ 5,500 ರೂ. ದರ ನಿಗದಿಪಡಿಸಿದ್ದು, ತುಂಬೆ ಡ್ಯಾಂ ಹೂಳೆತ್ತುವಿಕೆಯಿಂದ ದೊರಕಿರುವ ಮರಳಿಗೆ 4,830 ರೂ‌. ದರ ನಿಗದಿಪಡಿಸಲಾಗಿದೆ.

ಪ್ರತಿಯೊಬ್ಬರಿಗೂ ಆ್ಯಪ್ ಮೂಲಕವೇ ಮರಳನ್ನು ಪೂರೈಸಲಾಗುತ್ತಿದ್ದು, https://www.dksandbazaar.com/ ಆ್ಯಪ್ ಮೂಲಕ ಮರಳು ಬೇಡಿಕೆಯನ್ನು ನೋಂದಣಿ ಮಾಡಲು ಆಯಾ ಗ್ರಾಮ ಪಂಚಾಯತ್​ಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಮಂಗಳೂರು: ನಗರದಲ್ಲಿ ನಿರ್ವಹಿಸುತ್ತಿರುವ ಸ್ಯಾಂಡ್ ಬಜಾರ್ ಆ್ಯಪ್ ಯಶಸ್ವಿಯಾಗಿ ಬೇಡಿಕೆದಾರರಿಗೆ ಪೂರೈಕೆಯಾಗುತ್ತಿದ್ದು, ಇದುವರೆಗೆ 11,466 ಬೇಡಿಕೆಗಳು ಸ್ವೀಕಾರವಾಗಿದೆ. 11,028 ಬೇಡಿಕೆಗಳಿಗೆ ಮರಳನ್ಯ ಆ್ಯಪ್ ಮೂಲಕ ನೀಡಲಾಗಿದೆ.

ದ.ಕ.ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳು ಯಶ್ವಸಿಯಾಗಿ ಪೂರೈಸಲು ಹಾಗೂ ನಿರ್ದಿಷ್ಟವಾಗಿ ಮತ್ತು ನಿಗದಿತವಾಗಿ ಜನಸಾಮಾನ್ಯರಿಗೆ ಮರಳನ್ನು ಪೂರೈಕೆ ಮಾಡಲು ಆ್ಯಪ್ ಮೂಲಕ ನೀಡಲಾಗುವ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು 48 ಗಂಟೆಗಳಲ್ಲಿ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಸಿಆರ್ ಜಡ್ ಮರಳು ದಿಬ್ಬ ಹಾಗೂ ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯಿಂದ ದೊರಕಿರುವ ಮರಳನ್ನು ಬೇಡಿಕೆದಾರರಿಗೆ ಪೂರೈಕೆ ಮಾಡಲಾಗುತ್ತಿದೆ. ಸಿಆರ್ ಜಡ್ ಮರಳುಗಳಿಗೆ ಪ್ರತೀ ಲೋಡ್ ಗೆ 5,500 ರೂ. ದರ ನಿಗದಿ ಪಡಿಸಲಾಗಿದೆ. ಅದೇ ರೀತಿ ತುಂಬೆ ಡ್ಯಾಂ ಹೂಳೆತ್ತುವಿಕೆಯಿಂದ ದೊರಕಿರುವ ಮರಳಿಗೆ 4,830 ರೂ‌. ದರ ನಿಗದಿಪಡಿಸಲಾಗಿದೆ.

Body:ಎಲ್ಲರಿಗೂ ಆ್ಯಪ್ ಮೂಲಕವೇ ಮರಳನ್ನು ಪೂರೈಕೆ ಮಾಡಲಾಗುತ್ತಿದ್ದು,
https://www.dksandbazaar.com/ ಆ್ಯಪ್ ಮೂಲಕ ಮರಳು ಬೇಡಿಕೆಯನ್ನು ನೋಂದಣಿ ಮಾಡಲು ಆಯಾ ಗ್ರಾಮ ಪಂಚಾಯತ್ ಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಯವರ ಪ್ರಕಟನೆ ತಿಳಿಸಿದೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.