ETV Bharat / state

ಶಿಕ್ಷಕಿಯರ ಜಗಳದಿಂದಾಗಿ ಬೇರೆ ಶಾಲೆ ಸೇರಿದ ವಿದ್ಯಾರ್ಥಿಗಳು; ಇಬ್ಬರಿಗೆ ವರ್ಗಾವಣೆ ಶಿಕ್ಷೆ, ಹೊಸಬರ ನೇಮಕ - ಈಟಿವಿ ಭಾರತ ಕನ್ನಡ

ಬೆಳ್ತಂಗಡಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೆದುರೇ ಜಗಳವಾಡುತ್ತಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಬೆಳ್ತಂಗಡಿ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ
ಬೆಳ್ತಂಗಡಿ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ
author img

By

Published : Jul 5, 2023, 10:28 AM IST

ಬೆಳ್ತಂಗಡಿ: ಶಿಕ್ಷಕರ ಜಗಳದಿಂದ ಬೇಸತ್ತ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿಕೊಂಡಿದ್ದು, ವಿದ್ಯಾರ್ಥಿಗಳಿಲ್ಲದೆ ಶಾಲೆಯೇ ಖಾಲಿಯಾಗಿದೆ. ಇಂಥದ್ದೊಂದು ವಿದ್ಯಮಾನ ಬೆಳ್ತಂಗಡಿ ತಾಲೂಕಿನ ಸೋಣಂದೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಪೋಷಕರ ದೂರೇನು?: "ಸುಮಾರು 75 ವರ್ಷದ ಇತಿಹಾಸ ಇರುವ ಮಾಲಾಡಿ ಗ್ರಾ.ಪಂ ವ್ಯಾಪ್ತಿಯ ಸೋಣಂದೂರು ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲೆಯ ಮೂವರು ಶಿಕ್ಷಕಿಯರು ವಿದ್ಯಾರ್ಥಿಗಳೆದುರೇ ಬಹಿರಂಗವಾಗಿ ಆಗಾಗ್ಗೆ ಜಗಳವಾಡುತ್ತಿದ್ದಾರೆ. ಶಿಕ್ಷಕಿಯರ ದಿನನಿತ್ಯದ ಜಗಳದಿಂದ ಬೇಸತ್ತು ಮಕ್ಕಳನ್ನು ಅಕ್ಕಪಕ್ಕದ ಸರ್ಕಾರಿ ಶಾಲೆಗಳಿಗೆ ಸೇರಿಸಿದ್ದೇವೆ" ಎಂದು ಪೋಷಕರು ಹೇಳುತ್ತಿದ್ದಾರೆ.

ಇದೇ ಶಾಲೆಯನ್ನು ಒಂದು ವರ್ಷದಿಂದ ದತ್ತು ಪಡೆದಿರುವ ಮಂಗಳೂರಿನ ಅರವಿಂದ್‌ ವಿವೇಕ್‌ ಪೌಂಡೇಶನ್‌, ಶಾಲಾಭಿವೃದ್ಧಿ ಕಡೆ ಗಮನ ಹರಿಸಿತ್ತು. ಫೌಂಡೇಶನ್‌ನಿಂದ ಶಾಲೆಗೆ ಇಬ್ಬರು ಶಿಕ್ಷಕಿಯರನ್ನು ನೀಡಲಾಗಿತ್ತು. ಈ ಶಿಕ್ಷಕಿಯರ ಜೊತೆಗೂ ಶಾಲೆಯ ಮೂವರು ಶಿಕ್ಷಕಿಯರು ಜಗಳವಾಡುತ್ತಿದ್ದರು ಎಂಬುದು ಪೋಷಕರು ದೂರು. ಈಗ ಮಕ್ಕಳಿಲ್ಲದೆ ಶಾಲೆ ಭಣಗುಡುತ್ತಿದೆ. ತರಗತಿಗಳೆಲ್ಲವೂ ಸಂಪೂರ್ಣ ಖಾಲಿಯಾಗಿವೆ.

ಶಿಕ್ಷಣಾಧಿಕಾರಿ ಪ್ರತಿಕ್ರಿಯೆ: ಮಂಗಳವಾರ ತಾಲೂಕು ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿದರಲ್ಲದೇ ಇಬ್ಬರು ಶಿಕ್ಷಕಿಯರನ್ನು ಬೇರೆ ಶಾಲೆಗೆ, ಬೇರೆ ಇಬ್ಬರು ಶಿಕ್ಷಕಿಯರನ್ನು ಈ ಶಾಲೆಗೆ ವರ್ಗಾವಣೆಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕಳೆದ ಕೆಲವು ದಿನಗಳಿಂದ ಇಬ್ಬರು ಶಿಕ್ಷಕಿಯರ ಸಮಸ್ಯೆಯಿಂದಾಗಿ ಮಕ್ಕಳಿಗೆ ತೊಂದರೆಯಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ತಕ್ಷಣ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗಿದೆ. ಜುಲೈ 5ರಿಂದ ಮಕ್ಕಳೆಲ್ಲರೂ ಮರಳಿ ಶಾಲೆಗೆ ಬರಲಿದ್ದಾರೆ" ಎಂದರು.

ಹಳೇ ವಿದ್ಯಾರ್ಥಿಯೊಬ್ಬರು ಮಾತನಾಡಿ, "ಶಿಕ್ಷಕರ ಸ್ವಪ್ರತಿಷ್ಠೆಯ ಕಾರಣಕ್ಕಾಗಿ ವಿದ್ಯಾದೇಗುಲ ಮಕ್ಕಳಿಲ್ಲದೇ ಬಡವಾಗಿದೆ. ತುಂಬ ನೋವಾಗ್ತಿದೆ. ಮುಂದಿನ ವರ್ಷ 75ನೇ ವರ್ಷದ ಸಂಭ್ರಮದಲ್ಲಿ ಇರುವ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇದ್ದಾರೆ. ಅದರೆ ಶಿಕ್ಷಕರ ಜಗಳದಿಂದ ಶಾಲೆಗೆ ಮಕ್ಕಳು ಬಾರದ ಸ್ಥತಿ ನಿರ್ಮಾಣವಾಗಿದೆ. ಪೋಷಕರು ಶಿಕ್ಷಕರಲ್ಲಿ ಈ ಬಗ್ಗೆ ವಿಚಾರಿಸಿದರೆ ನಾವು ಸರ್ಕಾರಿ ನೌಕಕರು ನಿಮ್ಮ ಸಲಹೆ ನಮಗೆ ಬೇಕಿಲ್ಲ ಎನ್ನುವುದಲ್ಲದೇ ಮಕ್ಕಳನ್ನು ಟಾರ್ಗೆಟ್ ಮಾಡಿ ಬೈಯುವಂತದ್ದು ಮಾಡಿದ್ದಾರೆ".

"ಈ ಕಾರಣದಿಂದಲೇ ಎಲ್ಲ ಮಕ್ಕಳನ್ನು ಇಲ್ಲಿಂದ ಬೇರೆ ಶಾಲೆಗೆ ಶಾಲೆಗೆ ಸೇರಿಸಿದ್ದಾರೆ. ಇದೀಗ ಬಿಇಒ ಆಗಮಿಸಿ ಶಿಕ್ಷಕರನ್ನು ವರ್ಗಾವಣೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಈಗಾಗಲೇ ಮಕ್ಕಳ ಪೋಷಕರ ಮನವೊಲಿಸಿದ್ದೇವೆ. ನಾಳೆಯಿಂದ ಎಲ್ಲ ಮಕ್ಕಳು ಎಂದಿನಂತೆ ಈ ಶಾಲೆಗೆ ಆಗಮಿಸಲಿದ್ದಾರೆ" ಎಂದರು.

ಇದನ್ನೂ ಓದಿ: Emotional Farewell: ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕಿಗೆ ವಿದ್ಯಾರ್ಥಿಗಳ ಕಣ್ಣೀರಿನ ವಿದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.