ETV Bharat / state

ಮಂಗಳೂರು: ಫುಡ್​ ಪಾಯ್ಸನ್​ ಪ್ರಕರಣ; ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ - ಚಿಕನ್ ಕಬಾಬ್ ತಿಂದು ಫುಡ್​ ಪಾಯಿಸನ್

ಮಂಗಳೂರು ಹೊರ ವಲಯದಲ್ಲಿರುವ ಸಿಟಿ ನರ್ಸಿಂಗ್​ ಕಾಲೇಜು ಹಾಸ್ಟೆಲ್​​ನಲ್ಲಿ ಫುಡ್​ ಪಾಯಿಸನ್‌ನಿಂದಾಗಿ ಹಲವು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು.

ಸಿಟಿ ಆಸ್ಪತ್ರೆ
ಸಿಟಿ ಆಸ್ಪತ್ರೆ
author img

By

Published : Feb 7, 2023, 5:43 PM IST

ಮಂಗಳೂರು: ನಗರದ ಹೊರವಲಯದ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್‌ನ 231 ವಿದ್ಯಾರ್ಥಿನಿಯರು ಗೀ ರೈಸ್ ಮತ್ತು ಚಿಕನ್ ಕಬಾಬ್ ತಿಂದು ಫುಡ್​ ಪಾಯಿಸನ್​ನಿಂದ ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕದ್ರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ನೀಡಿರುವ ದೂರಿನಂತೆ ಕಾಲೇಜು ಆಡಳಿತ ಮಂಡಳಿಯ ವಿರುದ್ದ ಕೇಸು ದಾಖಲಾಗಿದೆ. ಸಂಶಯಾಸ್ಪದ ವಿಷಕಾರಿ ಆಹಾರವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನೀಡಲಾಗಿದೆ. ಆಹಾರ ತಯಾರಿಕೆ ಹಾಗೂ ಪೂರೈಕೆಯಲ್ಲಿ ಶುಚಿತ್ವ ಕಾಪಾಡದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸುವ ಸಂದರ್ಭವೂ ಸೂಕ್ತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ವರದಿ ಮಾಡದೇ ಲೋಪ ಎಸಗಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಆಹಾರ ಸುರಕ್ಷಿತಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿಗಳು ಜಂಟಿಯಾಗಿ ಹಾಸ್ಟೆಲ್‌ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ತಯಾರಿಸಿರುವ ಆಹಾರ ಪದಾರ್ಥಗಳು, ಕುಡಿಯುವ ನೀರು ಫ್ರಿಡ್ಜ್‌ನಲ್ಲಿದ್ದ ಮಾಂಸ ಇನ್ನಿತರೆ ಆಹಾರ ವಸ್ತುಗಳನ್ನು ತಂಡ ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಅಲ್ಲದೇ ತಕ್ಷಣದಿಂದ ಅಡುಗೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ತಯಾರಿಸದಂತೆ ನಿರ್ಬಂಧ ವಿಧಿಸಿದೆ.

ಇದನ್ನೂ ಓದಿ: ಐತಿಹಾಸಿಕ ಲಕ್ಕುಂಡಿ ಉತ್ಸವ-2023: ಫೆ.10ರಂದು ಮುಖ್ಯಮಂತ್ರಿಗಳಿಂದ ಚಾಲನೆ

ಪೋಷಕರ ಆಕ್ರೋಶ: ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಸಭೆ ನಡೆಸಲಾಗಿದೆ. ಈ ವೇಳೆ ಪೋಷಕರು ಹಾಸ್ಟೆಲ್​ ಅವ್ಯವಸ್ಥೆ, ಸರಿಯಾದ ಆಹಾರ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಮಕ್ಕಳು ಯಾವ ಆಸ್ಪತ್ರೆಯಲ್ಲಿ ಇದ್ದಾರೆಂದು ಇನ್ನೂ ತಿಳಿದು ಬಂದಿಲ್ಲ ಎಂಬ ಗೊಂದಲದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಬಳಿಕ ಎಸಿಪಿಯವರ ಸಮಕ್ಷಮದಲ್ಲಿ ಪೋಷಕರಿಗೆ ಸಮಾಧಾನ ಹೇಳಿ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ.

ಇದನ್ನೂ ಓದಿ : ನಮ್ಮ ಮೆಟ್ರೋ ಹಳಿಯಲ್ಲಿ ಬಿರುಕು; ತ್ವರಿತ ಕಾಮಗಾರಿಯಿಂದ ಆತಂಕ ದೂರ

ಒಟ್ಟು 231 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 115 ವಿದ್ಯಾರ್ಥಿನಿಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 116 ಮಂದಿ ವಿದ್ಯಾರ್ಥಿನಿಯರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಕ್ತ ಎ.ಜೆ.ವೈದ್ಯಕೀಯ ಕಾಲೇಜಿನಲ್ಲಿ 7, ಮಂಗಳಾ ಆಸ್ಪತ್ರೆಯಲ್ಲಿ 3, ಯುನಿಟಿ ಆಸ್ಪತ್ರೆಯಲ್ಲಿ 38, ಕೆಎಂಸಿ ಜ್ಯೋತಿಯಲ್ಲಿ 5, ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ 61, ಸಿಟಿ ಆಸ್ಪತ್ರೆಯಲ್ಲಿ 2 ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರಾಗಿ ಖರೀದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಂತ ಟ್ರ್ಯಾಕ್ಟರ್​ಗಳು : ಸ್ಥಳಕ್ಕೆ ತಹಶೀಲ್ಧಾರ್ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.