ಕಡಬ/ಮಂಗಳೂರು: ರಾಜ್ಯ ಮಟ್ಟದ ಬೈಬಲ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಡಬ ಸಮೀಪದ ಕುಂತೂರು ಪದವು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಭದ್ರಾವತಿ ಧರ್ಮಪ್ರಾಂತ್ಯದ ಎನ್‌ಆರ್ ಪುರದಲ್ಲಿ ನಡೆದ ಸಮಾವೇಶದಲ್ಲಿ ಈ ಸ್ಪರ್ಧೆ ನಡೆದಿದ್ದು, ಸಂಡೇ ಸ್ಕೂಲ್ ವಿದ್ಯಾರ್ಥಿಗಳಾದ ಜೆನೆಟ್ ಎಲಿಝಬೆತ್ ಉಮ್ಮಿನಿಯಿಲ್, ಜೋಯಿಶಿ ಅನ್ನಉಮ್ಮಿನಿಯಿಲ್ ಹಾಗೂ ಪ್ರಿಯಾ ಅಲ್ಫೋನ್ಸಾ ಎಡೆಕ್ಯಾಟ್ ಎಂಬವರು ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ.
ಭದ್ರಾವತಿ ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಜೋಸೆಫ್ ಅರುಮಚಾಡತ್, ಮಂಡ್ಯ ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಸೆಬಾಸ್ಟೀನ್ ಎಡೆಯನ್‌ತರತ್ತ್ ಹಾಗೂ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಲಾರೆನ್ಸ್ ಮುಕ್ಕುಝಿಯವರ ನೇತೃತ್ವದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.