ಪುತ್ತೂರು: ಸವಣೂರು ಪುತ್ತೂರು ರಸ್ತೆಯ ಮಾಂತೂರು ಬಳಿ ಬೈಕ್ ಅಪಘಾತದಲ್ಲಿ ವಿವೇಕಾನಂದ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿನ್ನೆ ತಡ ರಾತ್ರಿ ಈ ಅಪಘಾತ ಸಂಭವಿಸಿದೆ.
ಮಡಿಕೇರಿ ತಾಲೂಕಿನ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಚೇತನ್ ಮೃತಪಟ್ಟ ಯುವಕನಾಗಿದ್ದಾನೆ. ಮತ್ತೊಬ್ಬ ಯುವಕ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ : ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್ ಡಿಕ್ಕಿ: ಮೂವರ ಸಾವು
ಸ್ನೇಹಿತನ ಮನೆಗೆ ಹೋಗುತ್ತಿದ್ದ ವೇಳೆ ನಡೆದ ಘಟನೆ:
ಚೇತನ್ ಪುತ್ತೂರು ಪಿಜಿ ಯಲ್ಲಿದ್ದು, ಮಾರ್ಚ್ 21 ರಂದು ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ಅವರ ಜೊತೆ ಹೋಗಿದ್ದ. ಬಳಿಕ ರಾತ್ರಿ ಸ್ನೇಹಿತ ಸುದೀಪ್ ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಮಾಂತೂರು ಸಮೀಪ ಬೈಕ್ ಅಪಘಾತವಾಗಿದೆ.