ETV Bharat / state

ಮಂಗಳೂರಿನಲ್ಲಿ ನೆಲೆಸಿದ ಲಂಕನ್ ತಮಿಳರ ಸೌಲಭ್ಯ ಸ್ಥಗಿತಕ್ಕೆ ಮುಂದಾದ ರಾಜ್ಯ ಸರ್ಕಾರ?

60ರ ದಶಕದಲ್ಲಿ ಸುಮಾರು 1,852 ಕುಟುಂಬಗಳಿಗೆ ಪುನರ್ವಸತಿ ಕಾರ್ಯವನ್ನು ಒಪ್ಪಿಕೊಂಡ ಅಂದಿನ ಕರ್ನಾಟಕವು ಅವರಿಗೆ ಅರಣ್ಯ ಪ್ರದೇಶಗಳ ಪರಿಧಿಯಲ್ಲಿ ರಬ್ಬರ್ ತೋಟಗಳಲ್ಲಿ ಉದ್ಯೋಗವನ್ನು ಒದಗಿಸಿತು. ಈಗ ವಿವಿಧ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ..

author img

By

Published : Jun 29, 2022, 5:42 PM IST

state-government-decided-to-facility-shutdown-of-srilankan-tamils-in-mangalore
ಮಂಗಳೂರಿನಲ್ಲಿ ನೆಲೆಸಿದ ಲಂಕನ್ ತಮಿಳರ ಸೌಲಭ್ಯ ಸ್ಥಗಿತಕ್ಕೆ ಮುಂದಾದ ರಾಜ್ಯ ಸರ್ಕಾರ?

ಸುಳ್ಯ(ದಕ್ಷಿಣಕನ್ನಡ) : ಜಿಲ್ಲೆಯ ಸುಳ್ಯ, ಕಡಬ ತಾಲೂಕುಗಳಲ್ಲಿ ನೆಲೆಸಿರುವ ಸುಮಾರು 2 ಸಾವಿರ ಶ್ರೀಲಂಕಾ ತಮಿಳು ಕುಟುಂಬಗಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಇದರ ನಡುವೆ ಸಂಬಳ ಸೇರಿದಂತೆ ಹಲವು ಸವಲತ್ತುಗಳು ಬಾರದ ಹಿನ್ನೆಲೆಯಲ್ಲಿ ಈ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಆರೋಪಗಳೂ ಕೇಳಿ ಬಂದಿವೆ.

ಶ್ರೀಲಂಕಾದಿಂದ ವಾಪಸಾತಿಯಾದ 2 ಸಾವಿರ ಲಂಕನ್ ತಮಿಳು ಕುಟುಂಬಗಳು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧೀನದಲ್ಲಿ (ಕೆಎಫ್‌ಡಿಸಿ) ಕಾರ್ಯ ನಿರ್ವಹಿಸುವ ಇಲ್ಲಿನ ವಿವಿಧ ರಬ್ಬರ್ ಎಸ್ಟೇಟ್‌ಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಈ ಕುಟುಂಬಗಳ ಜನರು ಸುಳ್ಯ ವಿಧಾನಸಭಾ ವ್ಯಾಪ್ತಿಯ ಬಿಳಿನೆಲೆ, ಮೇದಿನಡ್ಕ ಮತ್ತು ಐವರ್ನಾಡಿನಲ್ಲಿರುವ ಮೂರು ರಬ್ಬರ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಹಿನ್ನೆಲೆ ಏನು? : 1964ರಲ್ಲಿ ಆಗಿನ ಶ್ರೀಲಂಕಾ ಪ್ರಧಾನಿ ಸಿರಿಮಾವೋ ಹಾಗೂ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಡುವಿನ ಒಪ್ಪಂದದ ಪ್ರಕಾರ ಶ್ರೀಲಂಕನ್ ನಿರಾಶ್ರಿತರಿಗಾಗಿ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಸುಮಾರು 4,400 ಹೆಕ್ಟೇರ್ ಭೂಮಿಯಲ್ಲಿ ರಬ್ಬರ್ ಬೆಳೆಯಲಾಗಿದೆ. 1,200 ಕಾರ್ಮಿಕರ ಮತ್ತು 360 ಕ್ಷೇತ್ರ ಹಾಗೂ ಕಚೇರಿ ಸಿಬ್ಬಂದಿ ಇಲ್ಲಿ ದುಡಿಯುತ್ತಿದ್ದರು. ಆದರೆ, ಇದೀಗ ಈ 360 ಮಂದಿ ಸಿಬ್ಬಂದಿಯಲ್ಲಿ ಶೇ.60ರಷ್ಟು ಜನರನ್ನು ಏಕಾಏಕಿ ಕೆಲಸದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ಈ ಹಿಂದೆ ಇದ್ದ ರಬ್ಬರ್ ತೋಟದ ಮೇಸ್ತ್ರಿಗಳನ್ನು ಹಿಂಬಡ್ತಿ ನೀಡಿ ರಬ್ಬರ್ ಮೂರ್ತೆ ಕೆಲಸಕ್ಕೆ ನಿಯೋಜಿಸಲಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ, ಬಿಪಿಎಲ್ ಕಾರ್ಡ್ ಇಲ್ಲದ, ಬೇರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರಿದ, 15 ವರ್ಷಕ್ಕೂ ಹೆಚ್ಚು ಕಾಲ ಕನಿಷ್ಠ ಸಂಬಳದಲ್ಲೇ ದುಡಿದ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

60ರ ದಶಕದಲ್ಲಿ ಸುಮಾರು 1,852 ಕುಟುಂಬಗಳಿಗೆ ಪುನರ್ವಸತಿ ಕಾರ್ಯವನ್ನು ಒಪ್ಪಿಕೊಂಡ ಅಂದಿನ ಕರ್ನಾಟಕವು ಅವರಿಗೆ ಅರಣ್ಯ ಪ್ರದೇಶಗಳ ಪರಿಧಿಯಲ್ಲಿ ರಬ್ಬರ್ ತೋಟಗಳಲ್ಲಿ ಉದ್ಯೋಗವನ್ನು ಒದಗಿಸಿತು. ಲಭ್ಯ ಮಾಹಿತಿಗಳ ಪ್ರಕಾರ ಒಪ್ಪಂದದ ಭಾಗವಾಗಿ, ಕರ್ನಾಟಕದಲ್ಲಿ ಎರಡು ತಲೆಮಾರುಗಳಿಗೆ ಅಂದರೆ ತಂದೆ ಮತ್ತು ಪುತ್ರರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳೊಂದಿಗೆ ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಉದ್ಯೋಗವನ್ನು ನೀಡಬೇಕಾಗಿತ್ತು. ಆದರೂ, ಈಗ ಸರ್ಕಾರವು ಈ ಪ್ರದೇಶದಲ್ಲಿ ಸೌಕರ್ಯ ನೀಡುತ್ತಿರುವುದು ಮೂರನೇ ತಲೆಮಾರಿನವರಿಗೆ ಎನ್ನಲಾಗಿದೆ.

ಆರೋಪ-ಪ್ರತ್ಯಾರೋಪ : ಕೇಂದ್ರ ಅಥವಾ ರಾಜ್ಯದಿಂದ ಯಾವುದೇ ಹೊಸ ಮಾರ್ಗಸೂಚಿಗಳ ಅನುಪಸ್ಥಿತಿಯಲ್ಲಿ ಸರ್ಕಾರವು ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಲಂಕಾ ತಮಿಳರಿಗೆ ಒದಗಿಸುವ ಸೌಲಭ್ಯಗಳನ್ನು ಪಾವತಿಸಲು ಕೆಎಫ್‌ಡಿಸಿ ಪ್ರತಿ ತಿಂಗಳು ಸುಮಾರು 1 ಕೋಟಿ ರೂಪಾಯಿ ವೆಚ್ಚ ಭರಿಸುತ್ತದೆ ಎಂದು ಅರಣ್ಯ ಇಲಾಖೆಯ ಹೇಳುತ್ತಿದೆ. ಆದರೆ, ಸ್ಥಳೀಯವಾಗಿ ಇಂತಹ ಯಾವುದೇ ಸೌಕರ್ಯ ಲಭ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ.

ರಾಧಾದೇವಿ ಹೇಳುವುದೇನು? : 2012ರಲ್ಲಿ ಆಗಿನ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಕೆಎಫ್‌ಡಿಸಿಗೆ ಮೂರನೇ ತಲೆಮಾರಿನ ವಾಪಸಾತಿದಾರರಿಗೂ ಪ್ರಯೋಜನಗಳನ್ನು ವಿಸ್ತರಿಸುವ ಭರವಸೆ ನೀಡಿ, ಕಾನೂನು ಅಭಿಪ್ರಾಯವನ್ನು ಕೋರಿದ್ದರು. ಇದರ ನಡುವೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಮತ್ತು ಕೆಎಫ್‌ಡಿಸಿಯ ಎಂಡಿ ರಾಧಾದೇವಿ ಅವರು ಕೆಲ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಕುಟುಂಬಗಳ ಸುಮಾರು 800-900 ಜನರು ಸುಳ್ಯದ ಬಿಳಿನೆಲೆ, ಮೇದಿನಡ್ಕ ಮತ್ತು ಐವೆರ್ನಾಡಿನಲ್ಲಿರುವ ಮೂರು ರಬ್ಬರ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಘಟಕಗಳಲ್ಲಿ ರಬ್ಬರ್ ಟ್ಯಾಪ್ಪರ್‌ಗಳಿಂದ ಹಿಡಿದು ಸಂಸ್ಕರಣಾ ಸಹಾಯಕರವರೆಗೆ ಶ್ರೀಲಂಕಾದ ವಾಪಸಾತಿ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದೇವೆ ಮತ್ತು ಅವರಿಗೆ 40ಕ್ಕೂ ಹೆಚ್ಚು ಕಾರ್ಮಿಕ ವಸಾಹತುಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇವೆ.

ಅವರ ಆರೋಗ್ಯ ಅಗತ್ಯಗಳನ್ನು ಪೂರೈಸಲು ನಾವು ಸಂಪೂರ್ಣ ಕ್ರಿಯಾತ್ಮಕ ಆಸ್ಪತ್ರೆಯನ್ನು ಹೊಂದಿದ್ದೇವೆ. ದಾಖಲೆಗಳ ಪ್ರಕಾರ, ದಿನಕ್ಕೆ 554 ರೂಪಾಯಿ ನೀಡಲಾಗುತ್ತದೆ. ಇದು ತಿಂಗಳಿಗೆ 18,000 ರೂ. ಆಗಲಿದ್ದು, ಇದು ಒಪ್ಪಂದದ ಭಾಗವಾಗಿ ಅವರು ಪಡೆಯುವ ವಿವಿಧ ಪ್ರಯೋಜನಗಳನ್ನೂ ಮೀರಿದೆ ಎಂದು ತಿಳಿಸಿದ್ದಾರೆ.

ಸಿಗುತ್ತಿರುವ ಪ್ರಯೋಜನೆಗಳೇನು? : ಶೇ.13ರಷ್ಟು ದರದಲ್ಲಿ ಗ್ರಾಚ್ಯುಟಿ, ಬಾಡಿಗೆ ರಹಿತ ವಸತಿ, ರಜಾ ದಿನಗಳು (14 ದಿನಗಳು), ಕ್ರೆಚ್ ಸೌಲಭ್ಯ, ಸ್ವದೇಶಿಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು, ಹಬ್ಬದ ಬೋನಸ್, ವೈದ್ಯಕೀಯ ಬೋನಸ್, ಮನರಂಜನಾ ಭತ್ಯೆ, ರೈನ್‌ಕೋಟ್-ಸ್ಯಾಂಡಲ್ (ಎರಡು ವರ್ಷಗಳಿಗೊಮ್ಮೆ), ಗಂಬೂಟ್‌ಗಳು, ದಿನ ಪತ್ರಿಕೆಗಳು, ಸ್ಥಳೀಯ ಸ್ಥಳಕ್ಕೆ ಭೇಟಿ ನೀಡಲು ವಾರದ ಮುಂಗಡ ಹಣ ನೀಡಲಾಗುತ್ತದೆ.

ಶೇ.8.3ರಷ್ಟು ದರದಲ್ಲಿ ವಾರ್ಷಿಕ ಬೋನಸ್, ಮಕ್ಕಳಿಗೆ ಹಾಲಿನ ಪುಡಿ, ಚಹಾ ಭತ್ಯೆ ಮತ್ತು ಆಹಾರ ಭತ್ಯೆ (10 ರೂ./ದಿನ). ಎಪಿಸಿಸಿಎಫ್ ಮೂಲ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ವಾಪಸಾತಿದಾರರಿಗೆ ವಿವರಿಸಲಾಗಿದೆ. ನಾವು ಅವರ ಒಕ್ಕೂಟಗಳೊಂದಿಗೆ ಚರ್ಚೆ ನಡೆಸಿದಾಗ, ಅವರ ಏಕೈಕ ಬೇಡಿಕೆ ಅವರ ಮಕ್ಕಳಿಗೆ ಉದ್ಯೋಗ ನೀಡುವುದಾಗಿತ್ತು. ತಮ್ಮ ಮಕ್ಕಳು ಈ ಕೌಶಲ್ಯಗಳನ್ನು ಮಾತ್ರ ಪಡೆದಿದ್ದಾರೆ ಮತ್ತು ಬೇರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ನಮಗೆ ಮನವಿ ಮಾಡಿದರು.

ಅವರು ಇದಕ್ಕೆ ಒಪ್ಪಿದ್ದರು ಮತ್ತು ಅವರಿಗೆ ಇತರ ಸೌಲಭ್ಯಗಳೂ ಬೇಡ ಎಂದು ಹೇಳಿದರು. ಆದ್ದರಿಂದ ನಾವು ಅವರನ್ನು ರಬ್ಬರ್ ಎಸ್ಟೇಟ್‌ಗಳಲ್ಲಿ ಕೆಲಸ ಇದ್ದಾಗ ಅವರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಆದರೆ, ಅವರ ಹಿಂದಿನ ಪೀಳಿಗೆಗೆ ಒದಗಿಸಿದ ಸೌಲಭ್ಯಗಳು ಇವರಿಗೂ ಸಿಗುವುದಿಲ್ಲ ಎಂದು ಎಂಡಿ ರಾಧಾದೇವಿ ವಿವರಿಸಿದ್ದಾರೆ.

ಆದರೆ, ಅಧಿಕಾರಿಗಳು ಹೇಳುವ ಪ್ರಕಾರ ಸನ್ನಿವೇಶ, ಮೂಲಸೌಕರ್ಯಗಳು, ಸವಲತ್ತುಗಳು, ಈ ಸ್ಥಳಗಳಲ್ಲಿ ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಉನ್ನತಾಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಕಣ್ಣಾರೆ ನೋಡಿ ಇಲ್ಲಿನ ಸಮಸ್ಯೆಗಳು, ಪರಿಸ್ಥಿತಿಗಳನ್ನು ಮನವರಿಕೆ ಮಾಡಿಕೊಳ್ಳಲಿ ಎಂಬುದು ಕಾರ್ಮಿಕರ ಆಗ್ರಹವಾಗಿದೆ.

ಇದನ್ನೂ ಓದಿ: ಮಂಗಳೂರು : ಮುಳುಗಿದ ಸಿರಿಯಾ ದೇಶದ ಹಡಗಿನಲ್ಲಿ ತೈಲ ಸೋರಿಕೆ ಆರಂಭ, ಮೀನುಗಾರಿಕೆ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.