ETV Bharat / state

ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ: ಸ್ವಲ್ಪದರಲ್ಲೇ ಬದುಕುಳಿದ ಮಂಗಳೂರು ಜೋಡಿ ಹೇಳಿದ್ದೇನು? - undefined

ಶ್ರೀ ವೇದಂ ಆಯುರ್ವೇದಿಕ್ ಮಲ್ಟಿ ಸ್ಪೆಷಲ್ ಆಸ್ಪತ್ರೆಯ ಮಾಲಿಕರೂ ಆಗಿರುವ ಡಾ.ಕೇಶವ ರಾಜ್ ಶ್ರೀಲಂಕಾದಲ್ಲಿ ತಮ್ಮ ಕಣ್ಣೆದುರಲ್ಲೇ ನಡೆದಿರುವ ಭಯಾನಕ ಚಿತ್ರಣಗಳ ಬಗ್ಗೆ ತಿಳಿಸಿದ್ದಾರೆ.

ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ
author img

By

Published : Apr 25, 2019, 3:37 AM IST

ಮಂಗಳೂರು: ವಿವಾಹ ವಾರ್ಷಿಕೋತ್ಸವ ಆಚರಿಸುವುದಕ್ಕೆಂದು ನಾನು ಹಾಗೂ ಪತ್ನಿ‌ ಶ್ರೀದೇವಿಯೊಂದಿಗೆ ಶ್ರೀಲಂಕಾಕ್ಕೆ ಹೋಗಿದ್ದು, ಸಿನೆಮನ್ ಗ್ರ್ಯಾಂಡ್ ಎಂಬ ಹೋಟೆಲ್​ನಲ್ಲಿ ಉಳಿದುಕೊಳ್ಳಬೇಕಿತ್ತು‌. ಆದರೆ, ಕೊನೆಯ ಕ್ಷಣದಲ್ಲಿ ಟೂರ್ ಪ್ಯಾಕೇಜನ್ನು ಬದಲಾವಣೆ ಮಾಡಿದ ಕಾರಣ ನನಗೆ ಈಗ ಮಾತನಾಡುವ ಅವಕಾಶ ಸಿಕ್ಕಿದೆ... ಹೀಗೆಂದವರು ಭಯಾನಕ ಬಾಂಬ್​ ದಾಳಿಯಿಂದ ಬಚಾವಾದ ದಂಪತಿ.

ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ

ಶ್ರೀಲಂಕಾ ಸರಣಿ ಸ್ಪೋಟದಲ್ಲಿ ಪಾರಾಗಿಬಂದ ಮಂಗಳೂರಿನ ಡಾ‌.ಕೇಶವರಾಜ್ ಈಟಿವಿ ಭಾರತ್​ ದೊಂದಿಗೆ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಗರದ ಕೆಪಿಟಿ ಸಮೀಪದ ಶರಬತ್ತು ಕಟ್ಟೆ ಎಂಬಲ್ಲಿರುವ ಶ್ರೀ ವೇದಂ ಆಯುರ್ವೇದಿಕ್ ಮಲ್ಟಿ ಸ್ಪೆಷಲ್ ಆಸ್ಪತ್ರೆಯ ಮಾಲಿಕರೂ ಆಗಿರುವ ಡಾ.ಕೇಶವ ರಾಜ್ ಶ್ರೀಲಂಕಾದಲ್ಲಿ ತಮ್ಮ ಕಣ್ಣೆದುರಲ್ಲೇ ನಡೆದಿರುವ ಭಯಾನಕ ಚಿತ್ರಣಗಳ ಬಗ್ಗೆ ಮಾತನಾಡುತ್ತಾ, ನಾವು ನೆಗೆಂಬೋ ಎಂಬಲ್ಲಿಗೆ ಹೋದಾಗ ಅಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿ ಚರ್ಚ್ ಮೇಲೆ ಬಾಂಬ್ ಸ್ಫೋಟ ಆಗಿತ್ತು. ಅಲ್ಲಿ ಪ್ರಾರ್ಥನೆ ಮಾಡುತ್ತಿರುವವರ ಮೇಲೆ ಆತ್ಮಾಹುತಿ ದಾಳಿಯಾಗಿ ಎಷ್ಟೋ ಜೀವಹಾನಿಯಾಗಿತ್ತು. ಅಲ್ಲೇ ಪಕ್ಕದ ಹೋಟೆಲ್​ನಲ್ಲಿ ಸುಮಾರು 8.30 ಗಂಟೆ ಹೊತ್ತಿಗೆ ಏನೋ‌ ದೊಡ್ಡದಾಗಿ ಸಿಡಿದ ಅನುಭವವಾಯಿತು. ಆದರೆ ಕೆಲಕ್ಷಣಗಳಲ್ಲೇ ಸಿಕ್ಕಾಪಟ್ಟೆ ಆ್ಯಂಬುಲೆನ್ಸ್​ಗಳು, ಪೊಲೀಸ್ ವಾಹನಗಳು ಹೋಗುತ್ತಿತ್ತು. ನಮಗೆ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ ಎಂದು ಭಯಾನಕ ಕ್ಷಣಗನ್ನು ನೆನಪು ಮಾಡಿಕೊಂಡರು.

ಇನ್ನು, ಅದೇ ಸಮಯಕ್ಕೆ ನಮ್ಮ ಗೈಡ್ ಬಂದು, ಸಣ್ಣದೊಂದು ಸ್ಫೋಟ ಸಂಭವಿಸಿದೆ ಎಂದು ಹೇಳಿ ಸುಮಾರು 160 ಕಿ.ಮೀ. ದೂರದ ನೊವೆರೊಲಿಯಾ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದರು ಎಂದು ಹೇಳಿದರು.

Intro:ಮಂಗಳೂರು: ವಿವಾಹ ವಾರ್ಷಿಕೋತ್ಸವ ಆಚರಿಸುವುದಕ್ಕೆಂದು ನಾನು ಪತ್ನಿ‌ ಶ್ರೀದೇವಿಯೊಂದಿಗೆ ಶ್ರೀಲಂಕಾಕ್ಕೆ ಟೂರ್ ಪ್ಯಾಕೇಜ್ ಮುಖಾಂತರ ಹೋಗಿ ಸಿನೆಮನ್ ಗ್ರ್ಯಾಂಡ್ ಎಂಬ ಹೊಟೇಲಲ್ಲಿ ಉಳಿದುಕೊಳ್ಳಬೇಕಿತ್ತು‌. ಆದರೆ ಕೊನೆಯ ಕ್ಷಣದಲ್ಲಿ ಆ ಟೂರ್ ಪ್ಯಾಕೇಜನ್ನು ಬದಲಾವಣೆ ಮಾಡಿದ ಕಾರಣ ನನಗೆ ಈಗ ಮಾತನಾಡುವ ಅವಕಾಶ ಸಿಕ್ಕಿತು ಅಥವಾ ಇದು ದೇವರ ಕೃಪೆಯೋ ಗೊತ್ತಿಲ್ಲ ಎಂದು ಶ್ರೀಲಂಕಾ ಸರಣಿ ಸ್ಪೋಟದಲ್ಲಿ ಪಾರಾಗಿ ಬಂದ ಮಂಗಳೂರಿನ ಡಾ‌.ಕೇಶವ ರಾಜ್ ಈಟಿವಿ ಭಾರತ್ ನೊಂದಿಗೆ ತಮ್ಮ‌ ಅನುಭವವನ್ನು ಬಿಚ್ಚಿಟ್ಟರು‌.

ನಗರದ ಕೆಪಿಟಿ ಸಮೀಪದ ಶರಬತ್ತು ಕಟ್ಟೆ ಎಂಬಲ್ಲಿರುವ ಶ್ರೀ ವೇದಂ ಆಯುರ್ವೇದಿಕ್ ಮಲ್ಟಿ ಸ್ಪೆಷಲ್ ಆಸ್ಪತ್ರೆಯ ಮಾಲಕರೂ ಆಗಿರುವ ಡಾ.ಕೇಶವ ರಾಜ್ ಶ್ರೀಲಂಕಾದಲ್ಲಿ ತಮ್ಮ ಕಣ್ಣೆದುರಲ್ಲೇ ನಡೆದಿರುವ ಭಯಾನಕ ಚಿತ್ರಣಗಳ ಬಗ್ಗೆ ಮಾತನಾಡುತ್ತಾ, ನಾವು ನೆಗೆಂಬೋ ಎಂಬಲ್ಲಿಗೆ ಹೋದಲ್ಲಿ ಅಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿ ಚರ್ಚ್ ಮೇಲೆ ಬಾಂಬ್ ಸ್ಫೋಟ ಆಗಿತ್ತು. ಅಲ್ಲಿ ಪ್ರಾರ್ಥನೆ ಮಾಡುತ್ತಿರುವವರ ಮೇಲೆ ಆತ್ಮಾಹುತಿ ದಾಳಿಯಾಗಿ ಎಷ್ಟೋ ಜೀವಹಾನಿಯಾಗಿತ್ತು. ಅಲ್ಲೇ ಪಕ್ಕದ ಹೊಟೇಲಲ್ಲಿ ಸುಮಾರು 8.30 ಗಂಟೆ ಹೊತ್ತಿಗೆ ಏನೋ‌ ದೊಡ್ಡದಾಗಿ ಸಿಡಿದ ಅನುಭವವಾಯಿತು. ಆದರೆ ಕೆಲಕ್ಷಣಗಳಲ್ಲೇ ಸಿಕ್ಕಾಪಟ್ಟೆ ಆ್ಯಂಬುಲೆನ್ಸ್ ಗಳು, ಪೊಲೀಸ್ ವಾಹನಗಳು ಹೋಗುತ್ತಿತ್ತು. ನಮಗೆ ಏನು ನಡೆಯುತ್ತಿದೆ ಗೊತ್ತಾಗಲಿಲ್ಲ‌. ಅದೇ ಸಮಯಕ್ಕೆ ನಮ್ಮ ಗೈಡ್ ನಮಗೆ ಸಣ್ಣದೊಂದು ಸ್ಪೋಟ ಸಂಭವಿಸಿದೆ ಎಂದು ಹೇಳಿ ಸುಮಾರು 160 ಕಿ.ಮೀ. ದೂರದ ನೊವೆರೊಲಿಯಾ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದರು ಎಂದು ಹೇಳಿದರು.

Body:ಆದರೆ ಬಾಂಬ್ ಸ್ಪೋಟ ಸಂಭವಿಸಿದ ಕೆಲಕ್ಷಣಗಳಲ್ಲೇ ಇಂಟರ್ನೆಟ್, ಫೋನ್, ಸಾಮಾಜಿಕ ಜಾಲತಾಣಗಳು ಯಾವುದೂ ದೊರಕುತ್ತಿರಲಿಲ್ಲ‌‌. ನಮ್ಮ ಕುಟುಂಬದೊಂದಿಗೆ ಮಾತನಾಡಲೂ ಯಾವ ಸಂಪರ್ಕವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅಷ್ಟೊತ್ತಿಗಾಗಲೇ ಈ ಸುದ್ದಿ ಮನೆಯಲ್ಲಿ ಗೊತ್ತಾಗಿ ಅವರು ದಿಗ್ಬ್ರಮೆಗೊಂಡಿದ್ದರು. ನಮ್ಮ ಸಂಪರ್ಕಿಸಲು ಪ್ರಯತ್ನಿಸಿ, ಕೊನೆಗೆ ಹೇಗೋ ಸಂಜೆ ಹೊತ್ತಿಗೆ ನಮ್ಮ ಗೈಡ್ ಗೆ ಕರೆ ಮಾಡಲು ಶುರು ಮಾಡಿದರು. ನಾವೂ ಲೋಕಲ್ ಸಿಮ್ ಗಳನ್ನು ಖರೀದಿಸಿ, ರೀಚಾರ್ಜ್ ಮಾಡಲು ಸಾಕಷ್ಟು ಹುಡುಕಾಟ ನಡೆಸಿದ್ದೆವು. ಬಾಂಬ್ ಸ್ಪೋಟದ ಕಾರಣ, ಕರ್ಫ್ಯೂ ಇದ್ದ ಕಾರಣ ಸಾಮಾನ್ಯ ಎಲ್ಲಾ ಅಂಗಡಿಗಳು ಮುಚ್ಚಿತ್ತು. ಕೊನೆಗೆ ಒಂದು ಕಡೆ ರೀಚಾರ್ಜ್ ಮಾಡಿಸಿ, ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದೆವು ಸಮಾಧಾನ ಪಡೆಸಿದ್ದೆವು ಎಂದರು.

ಆದರೆ ಭಯದಲ್ಲೇ ನಾವು ಆ ಇಡೀ ರಾತ್ರಿ ಕಳೆದಿದ್ದೆವು. ಟೂರ್ ಕ್ಯಾನ್ಸಲ್ ಮಾಡಿ ಮರಳಿ ಭಾರತಕ್ಕೆ ಬರುವ ಯೋಚನೆ ಮಾಡಿದ್ದರೂ, ಬರುವುದು ಹೇಗೆ ಎಂಬ ಯೋಚನೆಯೂ ಇತ್ತು. ಫ್ಲೈಟ್ ಬುಕಿಂಗ್ ಆಗಬೇಕು. ಏನು ಮಾಡುವುದು ತಿಳಿಯುತ್ತಲೇ ಇರಲಿಲ್ಲ. ನಮ್ಮ ಪ್ಲ್ಯಾನಿಂಗ್ ಪ್ರಕಾರ ನಾವು ಎಲ್ಲಾ ಸ್ಥಳಗಳನ್ನು ನೋಡಿಲ್ಲ. ನಿನ್ನೆ ನಾವು ವಿಮಾನ ನಿಲ್ದಾಣಕ್ಕೆ ಬಂದೆವು. ಆರು ಗಂಟೆ ಹೊತ್ತಿಗೆ ಬಂದರೂ ಚೆಕಿಂಗ್ ಆದಾಗ ರಾತ್ರಿ ಹನ್ನೆರಡು ಆಗಿತ್ತು. ಅಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯೂ ಇರಲಿಲ್ಲ. ನೆಲದಲ್ಲಿ ಕುಳಿತುಕೊಂಡಿದ್ದೆವು ಎಂದು ತಮ್ಮ ಅನುಭವಗಳನ್ನು ಕೇಶವ ರಾಜ್ ಬಿಚ್ಚಿಡುತ್ತಾ ಹೋದರು.

Conclusion:ಒಂದು ಸಂತೋಷದ ಸಂಗತಿ ಎಂದರೆ ನಮ್ಮ ಭಾರತದಿಂದ ನಮ್ಮ ಬಗ್ಗೆ ಸುಮಾರಷ್ಟು ಜನ ವಿಚಾರಿಸಲು ಪ್ರಯತ್ನ ಪಟ್ಟರು. ಸಾಯಂಕಾಲ ಆದ ಬಳಿಕ ಹೋಟೆಲ್ ಗಳಿಗೆ ಹೋದಾಗ ಭಾರತದ ಫೋನ್ ಸಂಖ್ಯೆಗೆ ವೈಫೈಗಳ ದೊರೆತರೆ ನಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುವವರಿಗೆ ಕರೆಗಳು ದೊರೆಯಲು ಆರಂಭವಾಯಿತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿ ಗೋಪಾಲ್ ಎಂಬವರು ಕರೆ ಮಾಡಿ ಮಾತನಾಡಿದರು. ಅಲ್ಲದೆ ಶ್ರೀಲಂಕಾದ ಇಂಡಿಯನ್ ಅಂಬಾಸಿ ಮೂಲಕ ನನ್ನ ದೂರವಾಣಿ ಸಂಖ್ಯೆ ನೀಡಿ ಅವರಿಂದ ಕರೆ ಮಾಡಿಸಿ, ನಮಗೆ ಧೈರ್ಯ ತುಂಬಲು ಪ್ರಯತ್ನ ಪಟ್ಟರು. ಅಂತೂ ನಾವು ಕ್ಷೇಮವಾಗಿ ಮನೆ ತಲುಪಿದ್ದೇವೆ ಎಂಬುವುದೇ ಸಂತೋಷ ಎಂದು ಹೇಳಿದರು‌.

Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.