ಮಂಗಳೂರು: ನಗರದ ಬಪ್ಪನಾಡು ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ನಿನ್ನೆ ರಾತ್ರಿ ವಿಶಿಷ್ಟ ಶಯನ ಸೇವೆ ನೆರವೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಭಕ್ತರು 2 ಕೋಟಿ ರೂ. ಮೌಲ್ಯದ ಮಲ್ಲಿಗೆ ಹೂವನ್ನ ಹರಕೆ ರೂಪದಲ್ಲಿ ನೀಡಿದರು. ಮಾರ್ಚ್ 17 ರಿಂದ ಬಪ್ಪನಾಡು ದೇವಾಲಯದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ನಿನ್ನೆ ಬೆಳಗ್ಗೆ ಹಗಲು ರಥೋತ್ಸವ ನಡೆಯಿತು. ರಾತ್ರಿ ವೇಳೆ ದುರ್ಗೆಯು ಮಲ್ಲಿಗೆ ಹೂವಿನ ರಾಶಿಯಲ್ಲಿ ಮಲಗುವ ವಿಶಿಷ್ಟ ಶಯನ ಸೇವೆ ನೆರವೇರಿಸಲಾಯಿತು. ಈ ಶಯನ ಸೇವೆಗೆ ಭಕ್ತರು ಸುಮಾರು 2 ಕೋಟಿ ರೂ. ಮೌಲ್ಯದ ಚೆಂಡು ಮಲ್ಲಿಗೆ ಹೂವನ್ನ ಹರಕೆ ರೂಪದಲ್ಲಿ ನೀಡಿದರು. ನಿನ್ನೆ ಒಂದು ಅಟ್ಟೆ ಮಲ್ಲಿಗೆಗೆ 1,200 ರೂ. ದರವಿತ್ತು.
ಇದನ್ನೂ ಓದಿ: ತಲೆಗೆ ಕಲ್ಲು ಬಡಿದು ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ