ಬಂಟ್ವಾಳ: ಸೆಪ್ಟೆಂಬರ್ ತಿಂಗಳ ಸಂಕ್ರಮಣದ ಮರುದಿನ ಸಿಂಗುಡೆಯ ದಿನ ಎಂದು ಕರೆಯಲಾಗುವ ದಿನ, ಕಾರಿಂಜ ಕ್ಷೇತ್ರದ ಶ್ರೀ ಕಾರಿಂಜೇಶ್ವರ ದೇವರ ವಿವಿಧ ಕಟ್ಟೆಗಳಿಗೆ ಆಗಮಿಸಿ, ತೆನೆ ಕೊಂಡು ಹೋಗುವ ಸಂಪ್ರದಾಯವಿದೆ.
ಗುರುವಾರ ಪಾದಯಾತ್ರೆಯ ಮೂಲಕ ದೇವರು ವಿವಿಧ ಕಟ್ಟೆಗಳ ಭೇಟಿಯ ಬಳಿಕ ಸರಪಾಡಿ ಗ್ರಾಮದ ಹಲ್ಲಂಗಾರು ಕಟ್ಟೆಗೆ ಆಗಮಿಸಿತು.
ಕಟ್ಟೆಯ ಪಕ್ಕದಲ್ಲೇ ಬಂಗಾರದ ಕದಿರು (ಬಂಗಾರ್ದ ಕುರಲ್) ಬೆಳೆದ ಕಟ್ಟೆ ಇದ್ದು, ಅಲ್ಲಿಂದ ಭತ್ತದ ತೆನೆಗಳನ್ನು ದೇವರಿಗೆ ಸಮರ್ಪಿಸಿ, ವಿಶೇಷ ಪೂಜೆ ಕನೆರವೇರಿಸಲಾಗುತ್ತದೆ. ನಂತರ ನೆರೆದ ಭಕ್ತಾಧಿಗಳು ಅಲ್ಲಿಂದ ತೆನೆಗಳನ್ನು ಕೊಂಡು ಹೋಗಿ, ತೆನೆ ಹಬ್ಬ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆ ತುಂಬಿಸಿಕೊಳ್ಳುವುದು ಎಲ್ಲರ ಗಮನ ಸೆಳೆದಿದೆ.