ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದಾದರೂ ವಸ್ತುಗಳನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯಲು ವಿಮಾನ ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಆಧಾರ್ ಕಾರ್ಡ್‌ಗಳಿಂದ ಹಿಡಿದು ಸೊಳ್ಳೆ ಬ್ಯಾಟ್‌ಗಳವರೆಗೆ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿದ್ದು, ವಾರಸುದಾರರಿಗೆ ತಲುಪಿಸಲಾಗಿದೆ. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಪ್ರತಿಯೊಬ್ಬರು ಅದನ್ನು ಮರಳಿ ಪಡೆಯಲು ಬಹಳಷ್ಟು ಶ್ರಮ ಪಡುತ್ತಾರೆ. ಇದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿ ತಿಂಗಳು ವಿವಿಧ ಬಗೆಯ ಸರಾಸರಿ 150 ವಸ್ತುಗಳು ಪತ್ತೆಯಾಗುತ್ತದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಮತ್ತೆ ನೀಡುವ ಸಂದರ್ಭದಲ್ಲಿ ಅದರ ನಿಜವಾದ ವಾರಸುದಾರರು ಯಾರು ಎಂಬುದನ್ನು ಖಚಿತ ಪಡಿಸಲು ಟರ್ಮಿನಲ್ ಮ್ಯಾನೇಜರ್ ಕಚೇರಿ ನಿಗಾವಹಿಸುತ್ತದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಡು ಬರುವ ಎಲ್ಲ ವಸ್ತುಗಳನ್ನು ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ ಠೇವಣಿ ಮಾಡಲಾಗುತ್ತದೆ ಮತ್ತು ರಿಜಿಸ್ಟರ್‌ನಲ್ಲಿ ನಮೂದಿಸಲಾಗುತ್ತದೆ. ಈಗಾಗಲೇ ಹಲವು ಪ್ರಯಾಣಿಕರು ಸೊಳ್ಳೆ ಬ್ಯಾಟ್, ಚಪ್ಪಲಿಗಳು, ಕುತ್ತಿಗೆಯ ದಿಂಬುಗಳು, ಸೆಲ್ ಫೋನ್ಗಳನ್ನು ಮತ್ತು ಅಮೂಲ್ಯವಾದ ಚಿನ್ನದ ಆಭರಣಗಳನ್ನು ಬಿಟ್ಟು ಹೋಗಿದ್ದಾರೆ.
ಈ ರೀತಿ ಬಿಟ್ಟು ಹೋದ ವಸ್ತುಗಳನ್ನು ಮರಳಿ ಪಡೆಯಲು ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರು ಬಂದರೆ, ತಪ್ಪಿದ್ದಲ್ಲಿ ಅವರ ಪ್ರತಿನಿಧಿಗಳು ಬರುತ್ತಾರೆ. ಇವುಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ. ಅದನ್ನು ಕಳೆದುಕೊಂಡ ವ್ಯಕ್ತಿಯು ಕಚೇರಿ ಸಮಯದಲ್ಲಿ ಟರ್ಮಿನಲ್ ಮ್ಯಾನೇಜರ್‌ನ ಕಚೇರಿಯನ್ನು ಸಂಪರ್ಕಿಸ ಬಹುದಾಗಿದೆ.
ಓದಿ: ಆನೆ ಕಾರಿಡಾರ್ನಲ್ಲಿ ಕಟ್ಟಡ ನಿರ್ಮಾಣ ಆರೋಪ: ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸ್ಪಷ್ಟನೆ