ETV Bharat / state

ಮಹಾಲಕ್ಷ್ಮಿಯ ಬಿಂಬ ಸ್ಪರ್ಶಿಸಿದ ಮೀನ ಸಂಕ್ರಮಣ ಸೂರ್ಯರಶ್ಮಿ! - Dakshina kannada latest news

ಪುತ್ತೂರಿನ ಶ್ರೀಲಕ್ಷ್ಮೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೀನ ಸಂಕ್ರಮಣ ವಿಶೇಷ ದಿನವಾದ ಇಂದು ಬೆಳಿಗ್ಗೆ ಸೂರ್ಯರಶ್ಮಿ ಶ್ರೀ ಮಹಾಲಕ್ಷ್ಮಿಯ ಬಿಂಬವನ್ನು ಸ್ಪರ್ಶಿಸಿತು. ಈ ಸಂದರ್ಭ ನೂರಾರು ಭಕ್ತರು ವರ್ಷಕ್ಕೊಮ್ಮೆ ನಡೆಯುವ ವಿಸ್ಮಯವನ್ನು ಕಣ್ತುಂಬಿಕೊಂಡರು.

Special puja at Puttur Shri Laxmi devi temple
ಶ್ರೀ ಮಹಾಲಕ್ಷ್ಮಿಯ ಬಿಂಬ ಸ್ಪರ್ಶಿಸಿದ ಸೂರ್ಯರಶ್ಮಿ
author img

By

Published : Mar 14, 2020, 8:10 PM IST

ಪುತ್ತೂರು: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ಶ್ರೀ ಲಕ್ಷ್ಮೀದೇವಿ ಬೆಟ್ಟದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಂಪ್ರತಿ ಮೀನ ಸಂಕ್ರಮಣ ವಿಶೇಷ ದಿನವಾದ ಶನಿವಾರ ಬೆಳಿಗ್ಗೆ ಸೂರ್ಯರಶ್ಮಿ ಶ್ರೀ ಮಹಾಲಕ್ಷ್ಮಿಯ ಬಿಂಬ ಸ್ಪರ್ಶಿಸಿತು.

ಸೂರ್ಯದೇವ ಕುಂಭ ರಾಶಿಯಿಂದ ಮೀನರಾಶಿಗೆ ದಾಟುವ ಸಂಕ್ರಮಣದ ಪುಣ್ಯ ಪರ್ವಕಾಲದಲ್ಲಿ ಬೆಳಿಗ್ಗೆ 7 ಗಂಟೆ ಹೊತ್ತಿಗೆ ಸೂರ್ಯರಶ್ಮಿ ದೇಗುಲದ ಮೂರು ಬಾಗಿಲುಗಳನ್ನು ದಾಟಿ ಶ್ರೀ ಮಹಾಲಕ್ಷ್ಮಿಯ ಬಿಂಬವನ್ನು ಸ್ಪರ್ಶಿಸಿತು. ಬಳಿಕ 7.30ಕ್ಕೆ ವಿಶೇಷವಾಗಿ ಆರತಿ ಬೆಳಗುವ ಮೂಲಕ ಪೂಜೆ ನಡೆಯಿತು. ದೇವಸ್ಥಾನದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರು ಶ್ರೀ ಮಹಾಲಕ್ಷ್ಮಿ ದೇವಿಗೆ ಮಹಾಪೂಜೆ ನೆರವೇರಿಸಿದರು. ಈ ಸಂದರ್ಭ ನೂರಾರು ಭಕ್ತರು ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನು ಕಣ್ತುಂಬಿಕೊಂಡರು.

ಶ್ರೀ ಮಹಾಲಕ್ಷ್ಮಿಯ ಬಿಂಬ ಸ್ಪರ್ಶಿಸಿದ ಸೂರ್ಯರಶ್ಮಿ

ಈ ಕ್ಷೇತ್ರದಲ್ಲಿ ಈಗಾಗಲೇ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಕೃಷ್ಣಶಿಲೆಯಿಂದ ನೂತನ ಗರ್ಭಗುಡಿ ನಿರ್ಮಾಣ ಹಾಗೂ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸುಂದರ ಶಿಲಾಮಯ ಸುತ್ತುಪೌಳಿ ಕಾಮಗಾರಿ ಭರದಿಂದ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.