ETV Bharat / state

ಸ್ವಾತಂತ್ರ್ಯ ದಿನಕ್ಕೆ ತಯಾರಾಗಿದೆ ಪರಿಸರ ಪ್ರೇಮಿ ಬಾವುಟ - Special Flg

ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಪೂರಕವಾದ ಬ್ಯಾಡ್ಜ್​ ಮತ್ತು ಬಾವುಟವನ್ನು ಮಂಗಳೂರಿನ ಪೇಪರ್​ ಸೀಡ್ಸ್​ ಸಂಸ್ಥೆ ತಯಾರಿಸಿದೆ.

ಸ್ವಾತಂತ್ರ್ಯ ದಿನಕ್ಕೆ ತಯಾರಾಗಿದೆ ಪರಿಸರ ಪ್ರೇಮಿ ಬಾವುಟ
ಪರಿಸರ ಪ್ರೇಮಿ ಕಲಾವಿದ ನಿತಿನ್ ವಾಸ್
author img

By

Published : Aug 13, 2020, 12:28 PM IST

Updated : Aug 13, 2020, 10:58 PM IST

ಮಂಗಳೂರು: ಕೊರೊನಾ ಕರಿನೆರಳಿನ ಮಧ್ಯೆ ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಆರೋಗ್ಯದ ಕಾಳಜಿ ಹೆಚ್ಚಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮಕ್ಕಾಗಿ ಆರೋಗ್ಯಕ್ಕೂ, ಪರಿಸರಕ್ಕೂ ಪೂರಕವಾದ ಬ್ಯಾಡ್ಜ್ ಮತ್ತು ಬಾವುಟ ತಯಾರಾಗಿದೆ.

ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿದ್ದತೆಗಳು ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ದಿನ ಕೆಲವರು ಪ್ಲಾಸ್ಟಿಕ್​ನಿಂದ ತಯಾರಿಸಿದ ಬಾವುಟಕ್ಕೆ ಮೊರೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪೇಪರ್ ಸೀಡ್ಸ್ ಸಂಸ್ಥೆ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಪೂರಕವಾದ ಬ್ಯಾಡ್ಜ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ಸ್ವಾತಂತ್ರ್ಯ ದಿನಕ್ಕೆ ತಯಾರಾಗಿದೆ ಪರಿಸರ ಪ್ರೇಮಿ ಬಾವುಟ

ಪೇಪರ್ ಸೀಡ್ಸ್ ಸಂಸ್ಥೆಯು ಈ ಬಾರಿ ಪೇಪರ್ ಪಲ್ಪ್​ನಿಂದ ತಯಾರಿಸಿದ ಬ್ಯಾಡ್ಜ್ ಮತ್ತು ಸಣ್ಣ ಬಾವುಟವನ್ನು ತಯಾರಿಸಿದೆ. ಬಟ್ಟೆಗೆ ಸಿಕ್ಕಿಸಿ ದೇಶದ ಸ್ವಾತಂತ್ರ್ಯ ದಿನವನ್ನ ಸಂಭ್ರಮಿಸಲು ಈ ಬ್ಯಾಡ್ಜ್ ಮತ್ತು ಬಾವುಟ ತಯಾರಾಗಿದೆ. ಇದರಲ್ಲಿ ಪ್ಲಾಸ್ಟಿಕ್ ಇಲ್ಲದೇ ಇರುವುದರಿಂದ ಇದು ಪರಿಸರಕ್ಕೆ ಹಾನಿಕಾರಕವಲ್ಲ. ಮಣ್ಣಿನಲ್ಲಿ ಅಥವಾ ಹೂಕುಂಡದಲ್ಲಿ ಇದನ್ನು ಹಾಕಿದರೆ ಕರಗಿ ಹೋಗುತ್ತದೆ.

ಅವರು ತಯಾರಿಸಿದ ಪೇಪರ್ ಪಲ್ಪ್​ನ ಈ ಬಾವುಟ್ ಮತ್ತು ಬ್ಯಾಡ್ಜ್​ನಲ್ಲಿ ಹಣ್ಣಿನ ಗಿಡದ ಬೀಜಗಳನ್ನು ಇಡಲಾಗಿದೆ. ಕೇರಳದಲ್ಲಿ ಪ್ರಖ್ಯಾತವಾದ ಫ್ಯಾಶನ್ ಪ್ರೂಟ್ ಮತ್ತು ಇತರ ತರಕಾರಿ ಬೀಜಗಳನ್ನು ಇದರೊಳಗೆ ಹಾಕಲಾಗಿದೆ. ಫ್ಯಾಷನ್ ಪ್ರೂಟ್ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ನಿವಾರಣೆಗೆ ಒಳ್ಳೆಯ ಹಣ್ಣು ಎಂಬ ನಂಬಿಕೆಯಿದೆ. ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಆರೋಗ್ಯಕ್ಕೆ ಪೂರಕವಾದ ಹಣ್ಣಿನ ಬೀಜಗಳನ್ನು ಹಾಕಲಾಗಿದೆ.

ನಿತಿನ್ ವಾಸ್ ಪ್ರತಿವರ್ಷ ಪರಿಸರಕ್ಕೆ ಪೂರಕವಾದ ಪೇಪರ್ ಪಲ್ಪ್​ನಿಂದ ತಯಾರಿಸಿದ ಬಾವುಟಗಳನ್ನು ತಯಾರಿಸುತ್ತಾರೆ ‌. ಅದರಲ್ಲಿ ತರಕಾರಿ ಬೀಜಗಳನ್ನು ಹಾಕಿ ಪರಿಸರ ಆಸಕ್ತಿಯನ್ನು ಜನರಲ್ಲಿ ಮೂಡಿಸುತ್ತಾರೆ. ಈ ಬಾರಿ ಬ್ಯಾಡ್ಜ್​ಗಳನ್ನು ತಯಾರಿಸಲಾಗಿದ್ದು ಅದರ ಜೊತೆಗೆ ಆರೋಗ್ಯಕ್ಕೆ ಉತ್ತಮವಾದ ಹಣ್ಣಿನ ಬೀಜಗಳನ್ನು ಹಾಕಿ ಜನರ ಆರೋಗ್ಯ ಕಾಳಜಿಯತ್ತಲೂ ಗಮನ ನೀಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಆರೋಗ್ಯಕ್ಕೂ, ಪರಿಸರಕ್ಕೂ ಪೂರಕವಾದ ಬಾವುಟಗಳನ್ನು ತಯಾರಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Last Updated : Aug 13, 2020, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.