ETV Bharat / state

‘ಕೇಶವಾನಂದ ಭಾರತಿ ಪ್ರಶಸ್ತಿ’ಗೆ ತುಷಾರ್ ಮೆಹ್ತಾ, ಡಿ.ಹರ್ಷೇಂದ್ರ ಕುಮಾರ್ ಸೇರಿ ನಾಲ್ವರ ಆಯ್ಕೆ - ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್

ಸುಳ್ಯ ತಾಲೂಕು ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿರುವ ‘ಸಂಪಾಜೆ ಯಕ್ಷೋತ್ಸವ’ದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

Harshendra kumar
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್
author img

By

Published : Mar 4, 2021, 5:37 PM IST

ಧರ್ಮಸ್ಥಳ (ದ.ಕ): ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಶ್ರೀಗಳವರ ಪ್ರಥಮ ಪುಣ್ಯಸ್ಮೃತಿ ಪ್ರಯುಕ್ತ ನಾಲ್ವರು ಸಾಧಕರಿಗೆ ಕೇಶವಾನಂದ ಭಾರತಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಾರ್ಚ್​ 6ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಸುಳ್ಯ ತಾಲೂಕು ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿರುವ ‘ಸಂಪಾಜೆ ಯಕ್ಷೋತ್ಸವ’ದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ (ಯಕ್ಷಗಾನ), ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (ನ್ಯಾಯಾಂಗ ), ಬೆಂಗಳೂರಿನ ಡಾ. ವಿದ್ಯಾಭೂಷಣ(ಸಂಗೀತ) ಹಾಗೂ ಸುಳ್ಯದ ಡಾ. ರೇಣುಕಾಪ್ರಸಾದ್ ಕೆ.ವಿ (ಶಿಕ್ಷಣ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಒಳ ರಸ್ತೆಗಳ ಅಭಿವೃದ್ಧಿಗೂ ಬೇಕಿದೆ ಆದ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.