ETV Bharat / state

ಆಭರಣ ಖರೀದಿಸಿ ಹಿಂತಿರುವಾಗ ಹುಷಾರು... ಮಂಗಳೂರಿನಲ್ಲಿ ಅರೆಸ್ಟ್​​​​ ಆದ ಆರೋಪಿಗಳ ಸ್ಟೋರಿ ಓದಿ - 6 ಜನ ಆರೋಪಿಗಳ ಬಂಧನ

ಚಿನ್ನಾಭರಣ ಖರೀದಿಸಿ ಅಂಗಡಿಗಳಿಂದ ಹೊರಬರುವ ಜನರನ್ನು ಟಾರ್ಗೆಟ್‌ ಮೂಡುವ ಗುಂಪು ಹಲ್ಲೆ ನಡೆಸಿ ನಗ ನಾಣ್ಯ ದೋಚುತ್ತಿತ್ತು. ಈ ಮೂಲಕ ವಿಲಾಸಿ ಜೀವನ ನಡೆಸುತ್ತಿದ್ದ 6 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

6 ಜನ ಆರೋಪಿಗಳ ಬಂಧನ
author img

By

Published : Aug 27, 2019, 9:17 PM IST

Updated : Aug 27, 2019, 9:33 PM IST

ಮಂಗಳೂರು: ಕಾರು ಮತ್ತು ಬೈಕ್​ಗಳಲ್ಲಿ ಆಭರಣಗಳ ಅಂಗಡಿಗಳಿಗೆ ಬಂದು ಚಿನ್ನ ಖರೀದಿಸಿ ಹೊರಬರುವ ಗ್ರಾಹಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುವ ಆರು ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾರ್‌ಸ್ಟ್ರೀಟ್‌ನ ಬಿಇಎಂ ಹೈಸ್ಕೂಲ್ ಸಮೀಪ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಅಬ್ದುಲ್ ಮಜೀದ್ ಹೆಚ್(32), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸೈಯದ್ ಅಲಿಯಾಸ್ ಮೊಹಮ್ಮದ್‌ ಮೋನು(31),ಕೆದಿಲ ಗ್ರಾಮದ ಮೊಹಮ್ಮದ್ ಶಾಫಿ ಅಲಿಯಾಸ್ ಶಾಫಿ(24), ಕೂಲ್ನಾಡು ಗ್ರಾಮದ ಆಸೀಫ್ ಕೆ.(25), ಪೆರಾಜೆ ಗ್ರಾಮದ ಮೊಹಮ್ಮದ್ ನಾಸೀರ್(20),ಅಹಮ್ಮದ್ ಬಶೀರ್ ಅಲಿಯಾಸ್ ಬಶೀರ್(29), ಮನ್ಸೂರ್ ಅಲಿ ಅಲಿಯಾಸ್ ಮನ್ಸೂರ್ (30) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್, ಮಾರುತಿ ರಿಡ್ಜ್, ಮಾರುತಿ ಸೆಲೆರಿಯೋ, ಟೋಯೋಟಾ ಗ್ಲಾಂಜಾ, ಬಜಾಜ್‌ ಕಂಪನಿಯ ಬೈಕ್, 5,12,000 ರೂ. ನಗದು ಮತ್ತು 140 ಗ್ರಾಂ ಚಿನ್ನ ಸಹಿತ ಸುಮಾರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇನ್ನುಳಿದವರಿಗಾಗಿ ಬಲೆ ಬೀಸಿದ್ದಾರೆ.

Intro:ಮಂಗಳೂರು: ಕಾರು ಮತ್ತು ಬೈಕ್‌ ಗಳಲ್ಲಿ ಆಗಮಿಸಿ ಚಿನ್ನಾಭರಣದ ಅಂಗಡಿಗಳಿಂದ ಚಿನ್ನ ಖರೀದಿಸಿ ಹೊರಬರುವ ಬರುವ ಗ್ರಾಹಕರನ್ನು ಹಾಗೂ ಮಾಲಕರನ್ನು ಅಡ್ಡಗಟ್ಟಿ ಹೆದರಿಸಿ ಅವರಲ್ಲಿದ್ದ ನಗ-ನಗದು ಸುಲಿಗೆ ಮಾಡಿ ವಿಲಾಸಿ ಜೀವನ ನಡೆಸಲು ಹೊಂಚು ಹಾಕುತ್ತಿದ್ದ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಕಾರ್ ಸ್ಟ್ರೀಟ್ ಬಳಿಯ ಬಿಇಎಂ ಹೈಸ್ಕೂಲ್ ಹತ್ತಿರ ನಡೆದಿದೆ. ತಲೆಮರೆಸಿಕೊಂಡಿದ್ದ ಓರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಹಿರೇತಡ್ಕ್ ಮನೆಯ ನಿವಾಸಿ ಅಬ್ದುಲ್ ಮಜೀದ್ ಹೆಚ್.(32), ಬಂಟ್ವಾಳ ತಾಲೂಕಿನ ಫರಂಗಿಪೇಟೆ ಅಂಚೆ, ಪುದು ಗ್ರಾಮದ ಆರಫಾ ಜುಮ್ಮಾ ಮಸೀದಿ ಹತ್ತಿರದ ಕುಂಪಣ ಮಜಲು ಹೌಸ್ ನಿವಾಸಿ ಸೈಯದ್ ಅಲಿಯಾಸ್ ಮೊಹಮ್ಮದ್‌ ಮೋನು(31), ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರು ಅಂಚೆಯ ಮೊಹಿದ್ದೀನ್ ಜುಮ್ಮಾ ಮಸೀದಿ ಬಳಿಯ ಗಡಿಯಾರ್ ಹೌಸ್ ನ ಮೊಹಮ್ಮದ್ ಶಾಫಿ ಅಲಿಯಾಸ್ ಶಾಫಿ(24), ಬಂಟ್ವಾಳ ತಾಲೂಕಿನ ಕೂಲ್ನಾಡು ಗ್ರಾಮದ ಬಾರೆಬೆಟ್ಟು ಅಂಚೆಯ ಕೆ.ಪಿ. ಬೈಲ್‌ಹೌಸ್ ನಿವಾಸಿ ಆಸೀಫ್ ಕೆ.(25), ಬಂಟ್ವಾಳ ‌ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಅಂಚೆಯ ಬುಡೋಳಿ ಹೌಸ್ ನ ಮೊಹಮ್ಮದ್ ನಾಸೀರ್(20), ಬಂಟ್ವಾಳ ತಾಲೂಕಿನ ಫರಂಗಿಪೇಟೆ ‌ ಪೋಸ್ಟ್ ಕುಂಪಣ ಮಜಲು‌ಹೌಸ್ ನ ಅಹಮ್ಮದ್ ಬಶೀರ್ ಅಲಿಯಾಸ್ ಬಶೀರ್(29), ಬಂಟ್ವಾಳ ತಾಲೂಕಿನ ಪುದು ‌ಗ್ರಾಮದ ಜುವೇರಿಯಾ ಸ್ಕೂಲ್ ಹತ್ತಿರ ಕುಂಪಣ ಮಜಲು ಹೌಸ್ ಮನ್ಸೂರ್ ಅಲಿ ಅಲಿಯಾಸ್ ಮನ್ಸೂರ್(30) ಬಂಧಿತ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ, ಸಿಬ್ಬಂದಿ, ಮಂಗಳೂರು ‌ಉತ್ತರ‌ ಠಾಣಾ ಅಧಿಕಾರಿ, ಮಂಗಳೂರು ‌ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿಯವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ‌.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1 ಮಾರುತಿ ಸ್ವಿಫ್ಟ್ ಕಾರು, 1ಮಾರುತಿ ರಿಡ್ಜ್ ಕಾರು, 1 ಮಾರುತಿ ಸೆಲೆರಿಯೋ ಕಾರು, 1 ಟೋಯೋಟಾ ಗ್ಲಾಂಜಾ ಕಾರು, 1 ಬಜಾಜ್‌ ಕಂಪನಿಯ ಬೈಕ್, 5,12,000 ರೂ. ನಗದು ಮತ್ತು 140 ಗ್ರಾಂ ಚಿನ್ನ ಸಹಿತ ಸುಮಾರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

Body:ಪ್ರಕರಣದಲ್ಲಿ ಇನ್ನು ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಅವರ ಪತ್ತೆಗೆ‌ ಪ್ರಯತ್ನ ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.

ಮಂಗಳೂರು ನಗರದ‌ ಪೊಲೀಸ್ ‌ಆಯುಕ್ತ ಡಾ.ಪಿ.ಎ‌ಸ್.ಹರ್ಷ, ಉಪ ಪೊಲೀಸ್ ಆಯುಕ್ತರಾದ(ಕಾ&ಸು), ಅರುಣಾಂಶು ಗಿರಿ, ಲಕ್ಷ್ಮಿ ಗಣೇಶ್(ಅಪರಾಧ ಮತ್ತು ಸಂಚಾರ), ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ ಒಕ್ಕಲಿಗ, ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ನಿರೀಕ್ಷಕ ಗೋವಿಂದರಾಜು ಬಿ., ಕ್ರೈಂ ವಿಭಾಗದ ಪಿಎಸ್ಐ ಸುಂದರ ಮತ್ತು ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್. ಮತ್ತು ಸಿಬ್ಬಂದಿ ಗಂಗಾಧರ್ ಎನ್., ವೆಲೆಸ್ಟೀನ್ ಜಾರ್ಜ್ ಡಿಸೋಜ, ವಿಶ್ವನಾಥ, ಸಂತೋಷ ಸಸಿಹಿತ್ಲು,‌ ಕಿಶೋರ್ ಕೋಟ್ಯಾನ್, ನಾಗರಾಜ ಚಂದರಗಿ, ಭೀಮಪ್ಪ ಉಪ್ಪಾರ, ರಮೇಶ ಲಮಾಣಿ, ಅಂಜನಪ್ಪ ಹಾಗೂ ಮಂಗಳೂರು ಉತ್ತರ ಠಾಣಾ ಎಎಸ್ಐ ಪದ್ಮನಾಭ ಮತ್ತು ಜಗದೀಶ್ ಹಾಗೂ ಸಿಬ್ಬಂದಿ ಸುಜನ್‌ ಶೆಟ್ಟಿ, ಚಿದಾನಂದ, ತಿಪ್ಪರೆಡ್ಡಿ, ಬಸವರಾಜ, ಮಹಾದೇವ ಹಾಗೂ ಮಂಗಳೂರು ನಗರ‌ ಪೊಲೀಸ್ ಕಂಪ್ಯೂಟರ್ ಘಟಕದ ಮನೋಜ್ ಕುಮಾರ್ ರವರು ಭಾಗವಹಿಸಿರುತ್ತಾರೆ.

Reporter_Vishwanath PanjimogaruConclusion:
Last Updated : Aug 27, 2019, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.