ETV Bharat / state

ಹಾಡು ಕರ್ನಾಟಕ ಖ್ಯಾತಿಯ ಜಗದೀಶ್ ಪುತ್ತೂರುಗೆ 'ತುಳುನಾಡ ಗಾನ ಗಂಧರ್ವ' ಬಿರುದು ಪ್ರದಾನ - Singer Jagdeesh Putthur got'Tulunada gana Gandharva' award

ಹಾಡು ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ‌ ಗಾಯಕ ಜಗದೀಶ್ ಪುತ್ತೂರು ಅವರಿಗೆ 'ತುಳುನಾಡ ಗಾನ ಗಂಧರ್ವ' ಬಿರುದು ನೀಡಿ ಸನ್ಮಾನ ಮಾಡಲಾಯಿತು.

ಹಾಡು ಕರ್ನಾಟಕ ಖ್ಯಾತಿಯ ಜಗದೀಶ್ ಪುತ್ತೂರು
ಹಾಡು ಕರ್ನಾಟಕ ಖ್ಯಾತಿಯ ಜಗದೀಶ್ ಪುತ್ತೂರು
author img

By

Published : Aug 28, 2020, 10:38 PM IST

ಮಂಗಳೂರು: ಹಾಡು ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ‌ ಗಾಯಕ ಜಗದೀಶ್ ಪುತ್ತೂರು ಅವರಿಗೆ ಓಮನ್ ತುಳುವೆರ್ ಸಂಘಟನೆಯ ವತಿಯಿಂದ ನಗರದ ಪ್ರೆಸ್ ಕ್ಲಬ್​​ನಲ್ಲಿ 'ತುಳುನಾಡ ಗಾನ ಗಂಧರ್ವ' ಬಿರುದು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಸಾವಿರಾರು ಮೈಲು ದೂರದ‌‌‌ ಓಮನ್​​ನಲ್ಲಿರುವ ಈ ಸಂಘಟನೆಯವರು ಮಂಗಳೂರಿಗೆ ಬರಲು ಅಸಾಧ್ಯವಾದ ಕಾರಣ, ಅವರ ಬದಲಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರ ಮುಂದಾಳತ್ವದಲ್ಲಿ ಬಿರುದು ಪ್ರದಾನ, ಸನ್ಮಾನ ನೆರವೇರಿತು. ಈ ಸಂದರ್ಭ ಜಗದೀಶ್ ಪುತ್ತೂರು ಅವರಿಗೆ ಪ್ರಸಿದ್ಧಿ ತಂದಿರುವ ಸ್ವಾಮಿ ಕೊರಗಜ್ಜ ಹಾಡನ್ನು ಹಾಡಿದರು.

ಹಾಡು ಕರ್ನಾಟಕ ಖ್ಯಾತಿಯ ಜಗದೀಶ್ ಪುತ್ತೂರುಗೆ 'ತುಳುನಾಡ ಗಾನ ಗಂಧರ್ವ' ಬಿರುದು ಪ್ರದಾನ

ಬಳಿಕ ಜಗದೀಶ್ ಪುತ್ತೂರು ಮಾತನಾಡಿ, ಓಮನ್ ತುಳುವೆರ್ ಸಂಘಟನೆಯು ದಾಯ್ಜಿ ವರ್ಲ್ಡ್ ವಾಹಿನಿಯಲ್ಲಿ ನನ್ನ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಈ ಮೂಲಕ ನನ್ನ ಕಂಠಸಿರಿಯನ್ನು ಮೆಚ್ಚಿ 'ತುಳುನಾಡ ಗಾನ ಗಂಧರ್ವ' ಬಿರುದು ನೀಡಿ ಸನ್ಮಾನ ಮಾಡಿದ್ದಾರೆ. ಈ ಸಂಘಟನೆಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಮಾತನಾಡಿ, ಪುತ್ತೂರಿನಲ್ಲಿರುವ ಸಣ್ಣ ಊರಿನಲ್ಲಿರುವ ಒಬ್ಬ ಸಂಗೀತ ಕಲಾವಿದನನ್ನು ಗುರುತಿಸಿ ತುಳುನಾಡಿನ ಗಾನಗಂಧರ್ವ ಎಂಬ ಬಿರುದು ನೀಡಿರೋದು ನಿಜವಾಗಿಯೂ ಸಂತಸದ ಸಂಗತಿ. ಕಲರ್ಸ್ ಕನ್ನಡ ವಾಹಿನಿಯ ಹಾಡು ಕರ್ನಾಟಕ ರಿಯಾಲಿಟಿ ಶೋನಲ್ಲಿ ಜಗದೀಶ್ ಪುತ್ತೂರು ಅವರು ಸ್ವಾಮಿ ಕೊರಗಜ್ಜ ತುಳು ಭಕ್ತಿಗೀತೆ ಹಾಡಿ ಎಲ್ಲರಿಂದಲೂ ಕರತಾಡನವನ್ನು ಗಿಟ್ಟಿಸಿಕೊಂಡರು. ಇದು ಅವರೊಳಗಿನ ಪ್ರತಿಭಾವಂತ ಗಾಯಕನಿಗೆ ದೊರಕಿರುವ ಮಹಾ ಸನ್ಮಾನ. ಇದೀಗ ಅವರಿಗೆ ದೊರಕಿರುವ ತುಳುನಾಡ ಗಾನ ಗಂಧರ್ವ ಬಿರುದು ನನ್ನ ಮುಂದಾಳತ್ವದಲ್ಲಿ ದೊರಕಿರೋದು ಸಂತಸದ ಸಂಗತಿ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.