ETV Bharat / state

ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಳ್ಳಾಲ್‌ಗೆ ಬೆದರಿಕೆ: ದುಷ್ಕರ್ಮಿಯ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ - ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಖಾಸಗಿ ಸುದ್ದಿ ವಾಹಿನಿಯ ಚರ್ಚೆ ವೇಳೆ ಕರೆ ಮಾಡಿದ್ದ ವ್ಯಕ್ತಿಯೋರ್ವ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್​ಗೆ ನೇರಪ್ರಸಾರದಲ್ಲೇ ಬೆದರಿಕೆ ಹಾಕಿದ್ದ ಸಂಬಂಧ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

siddramaiah-demanded-to-probe-in-case-of-threatens-lavanya-bellal-in-tv-debate
ಖಾಸಗಿ ವಾಹಿನಿಯಲ್ಲಿ ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಳ್ಳಾಲ್‌ಗೆ ಬೆದರಿಕೆ
author img

By

Published : Oct 3, 2021, 1:18 PM IST

ಮಂಗಳೂರು: ನಗರದ ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಹಾಗೂ ಅವರ ಪುತ್ರಿ ಬೆದರಿಕೆ ಹಾಕಿದ್ದವನನ್ನು ಬಂಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಂಗಳೂರಿನ‌ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ ಲಾವಣ್ಯ ಬಳ್ಳಾಲ್​ ಮತ್ತು ಅವರ ಕುಟುಂಬದವರಿಗೆ ಹಲ್ಲೆ ಮಾಡುವ ಬೆದರಿಕೆಯೊಡ್ಡಿರುವುದು ಖಂಡನೀಯ. ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ತಕ್ಷಣ ಸಂಘ ಪರಿವಾರಕ್ಕೆ ಸೇರಿದವನು ಎನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದರು.

  • ಮಂಗಳೂರಿನ‌ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ @LavanyaBallal ಮತ್ತು ಅವರ ಕುಟುಂಬದವರಿಗೆ ಹಲ್ಲೆಯ ಬೆದರಿಕೆಯೊಡ್ಡಿರುವುದು ಖಂಡನೀಯ. @compolmlr ಅವರು ತಕ್ಷಣ ಸಂಘ ಪರಿವಾರಕ್ಕೆ ಸೇರಿದವನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು. pic.twitter.com/7RIH0Gd1if

    — Siddaramaiah (@siddaramaiah) October 2, 2021 " class="align-text-top noRightClick twitterSection" data=" ">

ಘಟನೆಯ ವಿವರ:

ಇತ್ತೀಚೆಗೆ ನಗರದ ಸುರತ್ಕಲ್​​ನಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ವಾಹನದ ಮೇಲೆ ದಾಳಿ ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಈ ವಿಚಾರ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಳ್ಳಾಲ್ ವfಡಿಯೊ ಮೂಲಕ ಘಟನೆಯನ್ನು ಖಂಡಿಸಿದ್ದರು. ಲಾವಣ್ಯ ಬಳ್ಳಾಲ್ ವfಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಮಂಗಳೂರಿನ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಚರ್ಚೆ ನಡೆದಿತ್ತು. ಈ ಚರ್ಚೆಯಲ್ಲಿ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್, ಬಿಜೆಪಿ ವಕ್ತಾರ ರಾಧಾಕೃಷ್ಣ, ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಬಜರಂಗದಳದ ಪ್ರದೀಪ್ ಸರಿಪಳ್ಳ ಭಾಗವಹಿಸಿದ್ದರು.

ಚರ್ಚೆಯ ವೇಳೆ ಮಂಗಳೂರಿನಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಲಾವಣ್ಯ ಜೊತೆ ಮಾತನಾಡಬೇಕೆಂದು ಕೇಳಿಕೊಂಡಿದ್ದಾನೆ. ಬಳಿಕ ಲಾವಣ್ಯ ಬಳ್ಳಾಲ್ ಅವರನ್ನು ಉದ್ದೇಶಿಸಿ, ಎಸಿ ಕಾರಿನಲ್ಲಿ ಕುಳಿತು ಸಂಘಪರಿವಾರದ ಬಗ್ಗೆ ಮಾತನಾಡುವುದಲ್ಲ. ಮಂಗಳೂರಿಗೆ ಮಗಳಸಹಿತ ಬನ್ನಿ, ನಿಮಗೂ ಹಲ್ಲೆ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.