ETV Bharat / state

ರಾಜ್ಯಾದ್ಯಂತ ಬಕ್ರೀದ್ ಆಚರಣೆ.. ಶುಭಕೋರಿದ ಸಿಎಂ BSY, ಸಿದ್ದರಾಮಯ್ಯ, HDK

author img

By

Published : Jul 21, 2021, 9:41 AM IST

ರಾಜ್ಯಾದ್ಯಂತ ಇಂದು ಬಕ್ರೀದ್ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಕರಾವಳಿಯ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿದ್ದು, ಮುಸ್ಲಿಂ ಬಾಂಧವರಿಗೆ ರಾಜಕೀಯ ನಾಯಕರು ಶುಭಹಾರೈಸಿದ್ದಾರೆ.

siddaramaiah-hdk-bsy-wishes-for-bakried-fest
ರಾಜ್ಯಾದ್ಯಂತ ಬಕ್ರೀದ್ ಆಚರಣೆ

ಮಂಗಳೂರು: ಇಂದು ರಾಜ್ಯಾದ್ಯಂತ ಬಕ್ರೀದ್ ಆಚರಿಸಲಾಗುತ್ತಿದ್ದು ಕಡಲನಗರಿ ಮಂಗಳೂರಿನಲ್ಲಿಯೂ ಮುಸ್ಲಿಮರು ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಮಸೀದಿಗಳಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದಾರೆ.

ಮಂಗಳೂರಿನ ಪ್ರಮುಖ ಮಸೀದಿಗಳಾದ ಉಳ್ಳಾಲ ದರ್ಗಾ, ಬಾವುಟ ಗುಡ್ಡೆಯ ಈದ್ಗಾ ಮಸೀದಿ, ಬಂದರ್​ನ ಝೀನತ್ ಬಕ್ಷ್ ಮಸೀದಿ ಮೊದಲಾದೆಡೆ ಮುಸ್ಲಿಂ ಬಾಂಧವರು ಪ್ರಾರ್ಥನೆ ನಡೆಸಿದ್ದಾರೆ.

ಬಕ್ರೀದ್ ಕುರಿತು ರಾಜ್ಯದ ಜನತೆಗೆ ಸಿಎಂ ಬಿಎಸ್​​ ಯಡಿಯೂರಪ್ಪ ಶುಭಹಾರೈಸಿದ್ದಾರೆ. ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ. ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ ಎಂದು ಪ್ರಾರ್ಥಿಸೋಣ. ಸುರಕ್ಷಿತವಾಗಿ ಹಬ್ಬ ಆಚರಿಸಿ ಎಂದು ಟ್ವೀಟ್ ಮಾಡಿದ್ದಾರೆ.

  • ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು.

    ತ್ಯಾಗ-ಬಲಿದಾನಗಳ ಸಂಕೇತವಾಗಿರುವ #EidAlAdha ಎಲ್ಲರ ನೋವುಗಳನ್ನು ಕಳೆದು, ಆರೋಗ್ಯ, ನಲಿವುಗಳನ್ನು ಹೊತ್ತು ತರಲಿ, ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ. ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ ಎಂದು ಪ್ರಾರ್ಥಿಸೋಣ. ಸುರಕ್ಷಿತವಾಗಿ ಹಬ್ಬ ಆಚರಿಸಿ. pic.twitter.com/FwKjUND8OO

    — B.S. Yediyurappa (@BSYBJP) July 21, 2021 " class="align-text-top noRightClick twitterSection" data=" ">

ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಸಹ ಟ್ವೀಟ್ ಮಾಡಿದ್ದು, ನಾಡಿನ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವ ಸಾರುವ ಹಬ್ಬವು ಎಲ್ಲೆಡೆ ಮತ್ತಷ್ಟು ಸ್ನೇಹ - ಸೌಹಾರ್ದತೆಯನ್ನು ಪಸರಿಸಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

  • ನಾಡಿನ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.
    ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಹಬ್ಬವು ಎಲ್ಲೆಡೆ ಮತ್ತಷ್ಟು ಸ್ನೇಹ-ಸೌಹಾರ್ದತೆಯನ್ನು ಪಸರಿಸಲಿ ಎಂದು ಆಶಿಸುತ್ತೇನೆ.#EidMubarak pic.twitter.com/dSXqZZvujI

    — H D Kumaraswamy (@hd_kumaraswamy) July 21, 2021 " class="align-text-top noRightClick twitterSection" data=" ">

ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಟ್ವಿಟರ್ ಮೂಲಕ ಶುಭಕೋರಿದ್ದು, ಬಕ್ರೀದ್ ಹಬ್ಬದ ತ್ಯಾಗ, ಬಲಿದಾನದ ಸಂದೇಶ, ಜನತೆಯ ಕಷ್ಟಕಾರ್ಪಣ್ಯ, ನೋವು - ದುಃಖಗಳಿಗೆ ಸ್ಪಂದಿಸಲು ನಮಗೆಲ್ಲ ಸ್ಪೂರ್ತಿ ನೀಡಲಿ. ದುರಿತದ ಕಾಲವನ್ನು ಜೊತೆ ಜೊತೆಯಾಗಿ ಎದುರಿಸುವ ಸದ್ಭಾವನೆ ನಮ್ಮದಾಗಲಿ. ಮುಸ್ಲಿಮ್ ಬಂಧುಗಳೆಲ್ಲರಿಗೂ ಈದ್ ಮುಬಾರಕ್ ಎಂದು ಹಾರೈಸಿದ್ದಾರೆ.

  • ಬಕ್ರೀದ್ ಹಬ್ಬದ ತ್ಯಾಗ, ಬಲಿದಾನದ ಸಂದೇಶ, ಜನತೆಯ ಕಷ್ಟಕಾರ್ಪಣ್ಯ, ನೋವು-ದುಃಖಗಳಿಗೆ ಸ್ಪಂದಿಸಲು ನಮಗೆಲ್ಲ ಸ್ಪೂರ್ತಿ ನೀಡಲಿ.

    ದುರಿತದ ಕಾಲವನ್ನು ಜೊತೆಜೊತೆಯಾಗಿ ಎದುರಿಸುವ ಸದ್ಭಾವನೆ ನಮ್ಮದಾಗಲಿ.

    ಮುಸ್ಲಿಮ್ ಬಂಧುಗಳೆಲ್ಲರಿಗೂ
    ಈದ್ ಮುಬಾರಕ್.#Bakrid pic.twitter.com/6tbTsydPY1

    — Siddaramaiah (@siddaramaiah) July 21, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಈದ್​ ಸಂಭ್ರಮ: ಈ ಆಚರಣೆಯ ಕಾರಣ, ಪ್ರಾಮುಖ್ಯತೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.