ETV Bharat / state

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಸುಳ್ಯದ ಗ್ರಾಮೀಣ ಪ್ರತಿಭೆ

ಬಹುಮುಖ ಪ್ರತಿಭೆ ಸುಳ್ಯದ ಶುಭದ ಆರ್. ಪ್ರಕಾಶ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ 2021 ಸೇರಿದ್ದಾರೆ. ಈ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

Shubhada R Prakash
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಶುಭದ ಆರ್. ಪ್ರಕಾಶ್
author img

By

Published : Jun 26, 2021, 12:48 PM IST

ಸುಳ್ಯ: ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಬಹುಮುಖ ಪ್ರತಿಭೆ ಶುಭದ ಆರ್. ಪ್ರಕಾಶ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ 2021 ಗೌರವವನ್ನು ಗಳಿಸಿದ್ದಾರೆ. ಸಂಗೀತ, ಭರತನಾಟ್ಯ, ಚಿತ್ರಕಲೆ ಮುಂತಾದ ಹಲವಾರು ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ 2021 ಲಭಿಸಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಜೂನಿಯರ್ ಗ್ರೇಡ್ ಮಾಡಿ ಸೀನಿಯರ್ ಮಾಡುತ್ತಿದ್ದಾರೆ. ಭರತ ನಾಟ್ಯದಲ್ಲಿ ಜೂನಿಯರ್ ಗ್ರೇಡ್ ಡಿಸ್ಟಿಂಕ್ಷನ್ ಪಡೆದಿದ್ದು, ಚಿತ್ರಕಲೆಯಲ್ಲಿಯೂ ಜೂನಿಯರ್ ಮತ್ತು ಸೀನಿಯರ್ ಗ್ರೇಡ್​​ನಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಜತೆಗೆ ರಾಜ್ಯಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಶುಭದ ಆರ್. ಪ್ರಕಾಶ್

ಗಡಿನಾಡ ಧ್ವನಿ ಕಲಾಭೂಷಣ ರಾಜ್ಯ ಪ್ರಶಸ್ತಿ, ಜ್ಞಾನ ಮಂದಾರ ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ, ತುಳುನಾಡ ಗಾನಕೋಗಿಲೆ ರಾಜ್ಯಪ್ರಶಸ್ತಿ, ಜೆಸಿಐ ಕಲಾಶ್ರೀ ಪ್ರಶಸ್ತಿ, ರೋಟರಿ ಕ್ಲಬ್ ಬಾಲಪ್ರತಿಭೆ ಪುರಸ್ಕಾರ, ಸ್ವರ ಮಂದಾರ ರಾಜ್ಯಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು, ಪುರಸ್ಕಾರಗಳನ್ನು ಪಡೆದಿದ್ದಾರೆ.

Shubhada R Prakash
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಶುಭದ ಆರ್. ಪ್ರಕಾಶ್

ಶುಭದ.ಆರ್.ಪ್ರಕಾಶ್ ಅವರು ಕನ್ನಡ ದೃಶ್ಯ ವಾಹಿನಿಯ ಸರಿಗಮಪ ಲಿಟಲ್ ಚಾಂಪಿಯನ್ ಸೀಸನ್ 16ರ ಸ್ಪರ್ಧಿಯಾಗಿರುತ್ತಾರೆ. ಇವರು ಸುಳ್ಯದ ಸೂರ್ತಿಲ ನಿವಾಸಿ ರವಿ ಪ್ರಕಾಶ್ ಸಿ.ಪಿ. ಮತ್ತು ಜಯಶ್ರೀ ಆರ್.ಪ್ರಕಾಶ್ ಅವರ ಪುತ್ರಿ. ಪ್ರಸ್ತುತ ಸುಳ್ಯದ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.