ಮಂಗಳೂರು: ಶಿವಳ್ಳಿ ಸಂಪದ ನೆಲ್ಯಾಡಿ ವಲಯ ವತಿಯಿಂದ ರಾಷ್ಟ್ರಸಂತ ವಿಶ್ವೇಶ ತೀರ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪೂಜ್ಯರ ಬದುಕಿನ ಸಾಧನೆ, ಮಾನವೀಯ ಗುಣ, ಧರ್ಮಶ್ರದ್ಧೆ, ದೀನದಲಿತರಿಗೆ ತುಂಬಿದ ಧೈರ್ಯ ,ಪ್ರಕೃತಿ ವಿಕೋಪಗಳಿಗೆ ಸ್ಪಂದಿಸಿದ ಸದ್ಗುಣ,ಪರಿಸರ ಹೋರಾಟ, ಧಾರ್ಮಿಕ ಸಾಮರಸ್ಯ ಮುಂತಾದವುಗಳಿಂದ ನಮಗೆಲ್ಲಾ ಸ್ಮರಣೀಯರಾಗಿದ್ದಾರೆ ಎಂದು ಸತೀಶ್ ಮುಡಂಬಡಿತ್ತಾಯರು ನುಡಿ ನಮನ ಸಲ್ಲಿಸಿದರು.
ಭಕ್ತರು ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ದೊಂಥಿಲ ಸುಬ್ರಹ್ಮಣ್ಯ ದೇವಳದ ವತಿಯಿಂದ ಶ್ರೀ ರಂಗ ಪೂಜೆ ನೆರವೇರಿತು.