ETV Bharat / state

ಹಾಸ್ಟೆಲ್​ಗೆ ನುಗ್ಗಿ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ದರೋಡೆ: ಕಾಮುಕನಿಗೆ 7ವರ್ಷ ಕಠಿಣ ಸಜೆ - Mangalore latest crime news

ಹಾಸ್ಟೆಲ್​ಗೆ ನುಗ್ಗಿ ಮೆಡಿಕಲ್​ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 7ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Jayaram Shetty
ಜಯರಾಮ ಶೆಟ್ಟಿ
author img

By

Published : Sep 28, 2020, 6:51 PM IST

ಮಂಗಳೂರು: ಹಾಸ್ಟೆಲ್​ಗೆ ನುಗ್ಗಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ‌ ನೀಡಿ, ಹಣ, ಎಟಿಎಂ ಕಾರ್ಡ್, ಮೊಬೈಲ್ ಫೋನ್ ದರೋಡೆ ನಡೆಸಿರುವ ವ್ಯಕ್ತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 6ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಏಳು ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ

ಪ್ರಕರಣದ ಹಿನ್ನೆಲೆ: ಮೈಸೂರು ಜಿಲ್ಲೆಯ ಕೆ.ಆರ್.ನಗರದ ಪ್ರಸ್ತುತ ನಗರದ ಗೋರಿಗುಡ್ಡೆ ಬಳಿ ವಾಸವಾಗಿದ್ದ ನಾಗೇಶ್ ಅಲಿಯಾಸ್ ನಾಗ(30) ಕೃತ್ಯ ಎಸಗಿದ್ದಾತ. ಈತ ಮಂಗಳೂರಿನ ಹಲವು ಹೊಟೇಲ್​ಗಳಲ್ಲಿ ಸಪ್ಲಯರ್ ಹಾಗೂ ಕುಕ್ಕಿಂಗ್ ಹೆಲ್ಪರ್ ಆಗಿ ದುಡಿದಿದ್ದ.

ಅಪರಾಧಿ ನಾಗೇಶನು ದರೋಡೆ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿರುವ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕ್ಷೇಮ ಲೇಡೀಸ್ ಹಾಸ್ಟೇಲ್​ಗೆ 2017ರ ಡಿಸೆಂಬರ್ 5ರಂದು ನಸುಕಿನ ವೇಳೆ 4ಗಂಟೆಗೆ ನುಗ್ಗಿದ್ದ. ಈ ಸಂದರ್ಭ ಆತನು ಹಾಸ್ಟೆಲ್ ಹಿಂಬದಿಯ ಪೈಪ್​ನ ಸಹಾಯದಿಂದ ಮೇಲಕ್ಕೆ ಹತ್ತಿ, ಗ್ರಿಲ್ಸ್ ಇಲ್ಲದ ವರಾಂಡ(ಸಿಟೌಟ್) ಮೂಲಕ ಗ್ಲಾಸ್ ಡೋರನ್ನು ಸರಿಸಿ ಹಾಸ್ಟೆಲ್​ ಒಳಗೆ ನುಗ್ಗಿದ್ದ.

ಹಾಸ್ಟೆಲ್ ನ ಮೂರನೇ ಮಹಡಿಯ ಎಲ್ಲಾ ಕೋಣೆಗಳು ಒಳಗಿನಿಂದ ಚಿಲಕ ಹಾಕಿರುವುದರಿಂದ ಎರಡನೇ ಮಹಡಿಗೆ ಬಂದು ಚಿಲಕ‌‌ ಹಾಕದ 521ನೇ ಕೋಣೆಯೊಳಗೆ ಪ್ರವೇಶಿಸಿದ್ದಾನೆ. ಅಲ್ಲಿ ಕೇರಳ ಮೂಲದ ನಾಲ್ಕನೇ ಸೆಮಿಸ್ಟರ್​ನ ಎಂಬಿಬಿಎಸ್ ವಿದ್ಯಾರ್ಥಿನಿ(22) ಮಲಗಿದ್ದಳು. ಅಂದು ಹಾಸ್ಟೆಲ್ ಸಹಪಾಠಿ ಇರದ ಕಾರಣ ಆಕೆ ಒಬ್ಬಳೇ ಇದ್ದಳು. ನಾಗೇಶ ಸದ್ದಾಗದಂತೆ ಮಲಗಿದ್ದ ವಿದ್ಯಾರ್ಥಿನಿ ಬಳಿ ಬಂದು ಏಕಾಏಕಿ ಆಕೆಯ ಬಾಯಿಗೆ ಕೈ ಅಡ್ಡ ಹಿಡಿದು, ತನ್ನ ಬಳಿಯಿದ್ದ ಪ್ಲಾಸ್ಟರನ್ನು ಬೊಬ್ಬೆ ಹಾಕದಂತೆ ಬಾಯಿಗೆ ಅಂಟಿಸಿದ್ದಾನೆ. ಬಳಿಕ ಅವಳ ಕೈಕಾಲುಗಳನ್ನು ಕಟ್ಟಿ 5 ಲಕ್ಷ ರೂ. ನೀಡಬೇಕೆಂದು ಕಬ್ಬಿಣದ ರಾಡ್ ತೋರಿಸಿ ಬೆದರಿಸಿದ್ದಾನೆ. ಈ ಸಂದರ್ಭ ವಿದ್ಯಾರ್ಥಿನಿ ಸನ್ನೆ ಮೂಲಕ ತನ್ನಲ್ಲಿ ಅಷ್ಟಿಲ್ಲ ಎಂದು ಪರ್ಸ್ ತೋರಿಸಿದ್ದಾಳೆ. ನಾಗೇಶ ಪರ್ಸ್ ನಲ್ಲಿದ್ದ 3,000 ರೂ. ಹಾಗೂ ಎರಡು ಎಟಿಎಂ ಕಾರ್ಡ್ ಗಳನ್ನು ಅಪಹರಿಸಿದ್ದಾನೆ‌. ಎಟಿಎಂ ಪಿನ್ ಅನ್ನು ಬೆದರಿಸಿ ಕೇಳಿದಾಗ ವಿದ್ಯಾರ್ಥಿನಿ ಸನ್ನೆ ಮೂಲಕ ತಿಳಿಸಿದ್ದಾಳೆ.

ಈ ಸಂದರ್ಭ ಅಪರಾಧಿ ನಾಗೇಶ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲಿಂದ ಮೂರನೇ ಮಹಡಿಯ 310ನೇ ಕೊಠಡಿಯಲ್ಲಿನ ಮೊಬೈಲ್ ಫೋನನ್ನು ಅಪಹರಿಸಿದ್ದಾನೆ. ಬಳಿಕ ಮಹಡಿಯ ಮೇಲ್ಗಡೆಯಿದ್ದ ಬಟ್ಟೆ ಒಣಗಲು ಹಾಕಿರುವ ಹಗ್ಗವನ್ನು ಇಳಿ ಬಿಟ್ಟು ಅದರ ಸಹಾಯದಿಂದ ಕೆಳಗಿಳಿದು ಅಲ್ಲಿಂದ ಪರಾರಿಯಾಗುತ್ತಾನೆ. ಅಲ್ಲಿಂದ ಬಂದ ನಾಗೇಶ ನಗರದ ಕಂಕನಾಡಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕದ್ದು ತಂದ ಎಟಿಎಂ ಕಾರ್ಡ್ ಬಳಸಿ 7,500 ರೂ‌. ಡ್ರಾ ಮಾಡಿದ್ದಾನೆ. ಅಂದೇ ತನ್ನ ಊರಾದ ಕೆ.ಆರ್.ನಗರಕ್ಕೆ ತೆರಳಿದ್ದ ಆತ ಅಲ್ಲಿ ಎಸ್​ಬಿಐ ಬ್ಯಾಂಕ್ ನಿಂದ 500 ರೂ. ಡ್ರಾ ಮಾಡಿದ್ದಾನೆ.

ಮರುದಿನ ಬೆಳಗ್ಗೆ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ.‌ ತಕ್ಷಣ ತನಿಖೆ ಕೈಗೊಂಡ ಪೊಲೀಸರು 2017ರ ಡಿಸೆಂಬರ್ 10ರಂದು ಆರೋಪಿ ನಾಗೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಂದಿನ ಉಳ್ಳಾಲ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಗೋಪಿಕೃಷ್ಣ ಪ್ರಾಥಮಿಕ ತನಿಖೆ ನಡೆಸಿದ್ದು, ಅಂದಿನ ಡಿಸಿಪಿ(ಅಪರಾಧ ಮತ್ತು ಕಾನೂನು) ಉಮಾ ಪ್ರಶಾಂತ್ ಅವರು ಸಮಗ್ರ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ‌.

ಪ್ರಕರಣವನ್ನು ಕೈಗೆತ್ತಿಕೊಂಡ ಆರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಚಾರಣೆ ನಡೆಸುತ್ತದೆ. ಈ ಸಂದರ್ಭ ಹಾಸ್ಟೇಲ್ ವರಾಂಡದ ಮೇಲಿನ ಆರೋಪಿಯ ಫಿಂಗರ್ ಪ್ರಿಂಟ್, ಹಣ ತೆಗೆಯಲು ಹೋದಾಗ ಲಭ್ಯವಾದ ಎಸ್​ಬಿಐ ಹಾಗೂ ಕೆನರಾ ಬ್ಯಾಂಕ್ ನ ಸಿಸಿಟಿವಿ ಫೂಟೇಜ್, ಪ್ಲಾಸ್ಟರ್ ಖರೀದಿಸಿದ್ದ ಮೆಡಿಕಲ್, ಸಂತ್ರಸ್ತೆಯ ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪಡೆದುಕೊಳ್ಳಲಾಗಿದೆ. ಅಲ್ಲದೆ 25 ಸಾಕ್ಷಿಗಳು ಹಾಗೂ 45 ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಿ ಆರೋಪಿ ತಪ್ಪಿತಸ್ಥನೆಂದು ನ್ಯಾಯಾಧೀಶೆ ಸೈದುನ್ನೀಸಾ ಘೋಷಣೆ ಮಾಡುತ್ತಾರೆ.

ಆರೋಪಿ ನಾಗೇಶ ನಡೆಸಿರುವ ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಸೆಕ್ಷನ್ 457ರ (ಅಕ್ರಮ ಪ್ರವೇಶ) ಪ್ರಕಾರ 7ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 1 ವರ್ಷ ಸಾದಾ ಸಜೆ, ಸೆಕ್ಷನ್ 380ರ ( ಕಳವುಗೈದಿರುವುದು) ಪ್ರಕಾರ 5ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 1 ವರ್ಷ ಸಾದಾ ಸಜೆ, ಸೆಕ್ಷನ್ 397ರ (ದರೋಡೆ) ಪ್ರಕಾರ 7ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 1 ವರ್ಷ ಸಾದಾ ಸಜೆ, ಸೆಕ್ಷನ್ 345ರ (ಲೈಂಗಿಕ ಕಿರುಕುಳ) ಪ್ರಕಾರ 5ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 1 ವರ್ಷ ಸಾದಾ ಸಜೆ ವಿಧಿಸಿ ನ್ಯಾಯಾಧೀಶೆ ಸೈದುನ್ನೀಸಾ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.